ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಿಗ್ಗೆ 4.30ಕ್ಕೆ ಸರಳವಾಗಿ ನೆರವೇರಿದ ಕೊಪ್ಪಳ ಗವಿಸಿದ್ಧೇಶ್ವರ ರಥೋತ್ಸವ

ಕೊಪ್ಪಳ: ಸುಮಾರು ಐದು ಲಕ್ಷಕ್ಕೂ ಹೆಚ್ಚು ಭಕ್ತರು ಸೇರುತ್ತಿದ್ದ ಕೊಪ್ಪಳ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ ಈ ಸಲವೂ ಸರಳವಾಗಿ ನೆರವೇರಿದೆ. ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆ ರಥೋತ್ಸವವನ್ನು ನಡೆಸುವ ಬಗ್ಗೆ ಭಕ್ತರಿಗೆ ಮಾಹಿತಿ ನೀಡಿರಲಿಲ್ಲ. ಆದರೂ ನೂರಾರು ಮಾಸ್ಕ್ ಧರಿಸಿ ಸಾಂಕೇತಿಕವಾಗಿ ತೇರು ಎಳೆದಿದ್ದಾರೆ.

ಕೊರೊನಾ 3ನೇ ಅಲೆ ಹಿನ್ನೆಲೆ ರಾಜ್ಯ ಸರ್ಕಾರ ಎಲ್ಲ ಜಾತ್ರೆಗಳಿಗೆ ನಿರ್ಬಂಧ ‌ಹೇರಿದೆ. ಹೀಗಾಗಿ ರಥೋತ್ಸವವನ್ನು ಬೆಳ್ಳಂಬೆಳಗ್ಗೆ 4.30ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ನಡೆಸಲಾಗಿದೆ. ಜಾತ್ರೆಯ ಅಂಗವಾಗಿ ನಡೆಯುತ್ತಿದ್ದ ಇತರ ಎಲ್ಲ ಕಾರ್ಯಕ್ರಮಗಳನ್ನು ಗವಿಸಿದ್ಧೇಶ್ವರ ಶ್ರೀಗಳು ರದ್ದುಗೊಳಿಸಿದ್ದಾರೆ. ಸಾಂಕೇತಿಕವಾಗಿ ತೇರು ಎಳೆಯುವ ನಿರ್ಧಾರವನ್ನು ಕೊನೆ ಕ್ಷಣದವರೆಗೆ ತಿಳಿಸಿರಲಿಲ್ಲ. ಕೆಲವು ಸಾಂಪ್ರದಾಯಿಕ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಿ ಮಠದ ಆವರಣಲ್ಲಿ ತೇರು ಎಳೆಯಲಾಗಿದೆ.

Edited By : Shivu K
PublicNext

PublicNext

19/01/2022 10:00 am

Cinque Terre

67.88 K

Cinque Terre

2