ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಲಾರ ಸುಕ್ಷೇತ್ರದಲ್ಲಿ ಶಿಬಾರದಿಂದ ಕಳಚಿ ಬಿದ್ದ ತ್ರಿಶೂಲ

ವಿಜಯನಗರ: ಜಿಲ್ಲೆಯ ಸುಕ್ಷೇತ್ರ ಮೈಲಾರದಲ್ಲಿನ ಮೈಲಾರಲಿಂಗೇಶ್ವರ ದೇವಸ್ಥಾನ ಮುಂಭಾಗದಲ್ಲಿರುವ ಶಿಬಾರದ ಮೇಲೆ ಅಳವಡಿಸಿದ್ದ ಕಲ್ಲಿನ ತ್ರಿಶೂಲ ಭಾನುವಾರ ಮತ್ತೊಮ್ಮೆ ಕಳಚಿ ಬಿದ್ದಿದೆ. ಈ ಅವಘಡ ಸಂಭವಿಸಿರುವುದರಿಂದ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ.

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಮುಚ್ಚಿರುವ ಕಾರಣ ಭಕ್ತರು ಶಿಬಾರ ಕಟ್ಟೆಗೆ ಹಣ್ಣು, ಕಾಯಿ ನೈವೇದ್ಯ ಅರ್ಪಿಸಿ ಅಲ್ಲಿಂದಲೇ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಭಕ್ತರು ಕಟ್ಟೆ ಮೇಲೆ ಇರಿಸಿದ್ದ ಬಾಳೆ ಹಣ್ಣು, ಕೊಬ್ಬರಿಯ ಪ್ರಸಾದವನ್ನು ತಿನ್ನಲು ಕೋತಿಗಳು ಪೈಪೋಟಿಗಿಳಿದು ಶಿಬಾರದ ಮೇಲೆ ಹಾರಾಟ ನಡೆಸಿದಾಗ ತ್ರಿಶೂಲ ಮೇಲಿಂದ ಬಿದ್ದು ಭಗ್ನವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

09/01/2022 10:51 pm

Cinque Terre

26.45 K

Cinque Terre

0

ಸಂಬಂಧಿತ ಸುದ್ದಿ