ಕಾರವಾರ:ಇಲ್ಲಿಯ ಪ್ರಸಿದ್ದ ಮಾರುತಿ ದೇವಸ್ಥಾನದ ಪ್ರಸಾದ ಬರೋಬ್ಬರಿ 2.50 ಲಕ್ಷಕ್ಕೆ ಹರಾಜಾಗಿ ಭಾರಿ ಸುದ್ದಿ ಆಗಿದೆ.
ಪ್ರತಿ ವರ್ಷ ಜನವರಿ ತಿಂಗಳಲ್ಲಿ ಶ್ರೀ ಮಾರುತಿ ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತದೆ. ಅದರಂತೆ ಭಾನುವಾರ ಇಲ್ಲಿ ಜಾತ್ರಾಮಹೋತ್ಸವ ಇತ್ತು. ಇದೇ ಸಂದರ್ಭದಲ್ಲಿಯೇ ದೇವರಿಗೆ ನೈವೇದ್ಯಕ್ಕೆ ಇಟ್ಟಿದ್ದ ಹಣ್ಣುಕಾಯಿ ಹರಾಜು ಕೂಡ ಮಾಡಲಾಯಿತು.
ಈ ವೇಳೆ ಅನೇಕ ಭಕ್ತರು ಹರಾಜು ಕೂಗಿದರು. ಆದರೆ 2.50 ಲಕ್ಷಕ್ಕೆ ಮಾರುತಿ ದಾಮೋದರ್ ಅನ್ನೋರು ದೇವರ ಪ್ರಸಾದವನ್ನ ಪಡೆದರು.ಅದೇ ಈಗ ಸುದ್ದಿ ಆಗಿದೆ.
PublicNext
03/01/2022 03:02 pm