ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿ ಭೇಟಿ ಆದ ತಿರುಪತಿ-ಶ್ರೀಶೈಲ ದೇವಸ್ಥಾನದ ಅರ್ಚಕರು

ನವದೆಹಲಿ:ತಿರುಪತಿ ಮತ್ತು ಶ್ರೀಶೈಲ ದೇವಸ್ಥಾನದ ಅರ್ಚಕರು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾಗಿದ್ದಾರೆ. ಈ ಭೇಟಿಯ ಸಮಯದಲ್ಲಿಯೇ ಮೋದಿಯನ್ನೂ ತಮ್ಮದೇ ರೀತಿಯಲ್ಲಿ ಸನ್ಮಾನಿಸಿ, ಗೌರವಿಸಿದ್ದಾರೆ.

ಅಂದ್ಹಾಗೆ ಅರ್ಚಕರು ಮೋದಿ ಅವರನ್ನ ಮೀಟ್ ಆಗಿರೋದಕ್ಕೆ ಕಾರಣ ದೊಡ್ಡದೇನೂ ಇಲ್ಲ. ಹೊಸ ವರ್ಷಕ್ಕೆ ಶುಭಾಶಯ ತಿಳಿಸಲೆಂದೇ ಮೋದಿಯನ್ನ ದೇವಸ್ಥಾನದ ಅರ್ಚಕರು ಭೇಟಿ ಆಗಿದ್ದಾರೆ.

ಈ ಹಿಂದೆ ಮೋದಿ ತಿರುಪತಿಗೂ ಹೋಗಿದ್ದರು. ಅಲ್ಲಿ ದೇವರ ದರುಶನವನ್ನೂ ಪಡೆದು ಬಂದಿದ್ದರು. ಆದರೆ ಈಗ ಅದೇ ದೇವಸ್ಥಾನದ ಅರ್ಚಕರೇ ದೆಹಲಿಯಲ್ಲಿ ಮೋದಿಯನ್ನ ಭೇಟಿ ಆಗಿದ್ದಾರೆ. ಶ್ರೀಶೈಲದ ಅರ್ಚಕರೂ ಈ ಸಂದರ್ಭದಲ್ಲಿದ್ದರು ಅನ್ನೋದು ಕೂಡ ವಿಶೇಷ.

Edited By :
PublicNext

PublicNext

02/01/2022 06:17 pm

Cinque Terre

99.03 K

Cinque Terre

5