ಬಾಗಲಕೋಟೆ: ವಚನ ಸಾಹಿತ್ಯದಲ್ಲಿ ಲಿಂಗದೇವ ಬದಲಾಗಿ ಕೂಡಲಸಂಗಮದೇವ ವಚನಾಂಕಿತ ಬಳಸಲು ನಿರ್ಧರಿಸಲಾಗಿದೆ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದ್ದಾರೆ.
25 ವರ್ಷಗಳ ಹಿಂದಿನ ವಚನಗಳ ಅಂಕಿತನಾಮ ವಿವಾದಕ್ಕೆ ಇತಿಶ್ರೀ ಹಾಡಿದ ಗಂಗಾದೇವಿ ಅವರು, ಬಸವಣ್ಣನವರ ವಚನಗಳ ಅಂಕಿತ ನಾಮ ಗೊಂದಲ ವಿಚಾರವಾಗಿ ಮಾಧ್ಯಮಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಈ ಮೊದಲು ಕೆಲವೆಡೆ ಬಸವಣ್ಣನವರ ವಚನಗಳಿಗೆ ಕೂಡಲಸಂಗಮದೇವ ಬದಲಾಗಿ, ಲಿಂಗದೇವ ಎಂಬ ಅಂಕಿತನಾಮ ಬಳಸಲಾಗುತ್ತಿತ್ತು. ಈ ವಿಚಾರ ಕೋರ್ಟ್ ಮೆಟ್ಟಿಲೇರಿದಾಗಲೂ ಕೂಡಲಸಂಗಮದೇವ ಎಂದು ವಚನಾಂಕಿತ ಬಳಸುವಂತೆ ಆದೇಶಿಸಲಾಗಿತ್ತು. ಈ ಬಗ್ಗೆ ಯಾವುದೇ ಗೊಂದಲ ಬೇಡ. ಇನ್ಮುಂದೆ ವಚನಗಳಲ್ಲಿ ಲಿಂಗದೇವ ಬದಲಾಗಿ ಕೂಡಲಸಂಗಮದೇವ ವಚನಾಂಕಿತ ಬಳಸಲು ನಿರ್ಧರಿಸಲಾಗಿದೆ ಎಂದು ಅಂಕಿತನಾಮದ ಗೊಂದಲಕ್ಕೆ ಮಾತೆ ಗಂಗಾದೇವಿ ತೆರೆ ಎಳೆದಿದ್ದಾರೆ.
PublicNext
29/12/2021 05:32 pm