ವಾರಾಣಸಿ:ಪ್ರಧಾನಿ ಮೋದಿ ಮೊನ್ನೆ ಡಿಸೆಂಬರ್ 13 ರಂದು ಕಾಶಿ ವಿಶ್ವನಾಥನ ಕಾರಿಡಾರ್ ಉದ್ಘಾಟಿಸಿದರು. ವಿಶೇಷ ಪೂಜೆಯನ್ನೂ ಸಲ್ಲಿಸಿದರು. ಆದರೆ ಈಗ ವಿಶೇಷ ಪೂಜೆ ಮಾಡಿಸಿರೋ ಅರ್ಚಕರ ವಿರುದ್ಧ ತನಿಖೆ ಆರಂಭಗೊಂಡಿದೆ.
ಹೌದು ಹಿಂದೂ ಧರ್ಮದಲ್ಲಿ ಒಂದು ನಂಬಿಕೆ ಇದೆ.ಮನೆಯಲ್ಲಿ ಯಾರೇ ನಿಧನ ಹೊಂದಿದರೆ, ಮನೆಯವರೆಲ್ಲ 10 ದಿನ ಸೂತಕದಲ್ಲಿಯೇ ಇರ್ತಾರೆ. ಅದೇ ರೀತಿ ಕಾಶಿ ವಿಶ್ವನಾಥನಿಗೆ ಪೂಜೆ ಮಾಡುವ ಮೂಲಕ ಅರ್ಚಕ ಶ್ರೀಕಾಂತ್ ಮಿಶ್ರಾ ಈ ಮೂಲ ಲೋಪ ಮಾಡಿದ್ದಾರೆ.
ಡಿಸೆಂಬರ್-05 ರಂದು ಅರ್ಚಕ ಶ್ರೀಕಾಂತ್ ಮಿಶ್ರಾ ಅವರ ಸೋದರಳಿಯ ವೇದ್ ಪ್ರಕಾಶ್ ಮಿಶ್ರಾ ಅಪಘಾತದಲ್ಲಿ ನಿಧನರಾಗಿದ್ದರು. ಆದಾಗಿಯ್ಯೂ ಶ್ರೀಕಾಂತ್ ಮಿಶ್ರಾ, ಕಾರಿಡಾರ್ ಉದ್ಘಾಟನೆಯ ದಿನ ವಿಶ್ವನಾಥನಿಗೆ ಪೂಜೆ ಸಲ್ಲಿಸಿದರು. ಇದು ತಪ್ಪು ಅನ್ನೋ ಮಾತುಗಳೂ ಈಗ ವ್ಯಕ್ತವಾಗುತ್ತಿವೆ. ತನಿಖೆನೂ ಆರಂಭವಾಗಿದೆ ಅಂತಲೂ ಹೇಳಲಾಗುತ್ತಿದೆ.
PublicNext
27/12/2021 08:06 am