ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದತ್ತ ಜಯಂತಿ ಉತ್ಸವ ಸಂಪನ್ನ : 10 ಸಾವಿರಕ್ಕೂ ಹೆಚ್ಚು ಜನ ಭಾಗಿ

ಚಿಕ್ಕಮಗಳೂರು : ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ದತ್ತ ಜಯಂತಿ ಅಂಗವಾಗಿ ಆಯೋಜಿಸಿರುವ ದತ್ತಮಾಲಾ ಅಭಿಯಾನ ಇಂದು ಸಂಪನ್ನಗೊಂಡಿದೆ.

ದತ್ತ ಜಯಂತಿ ಉತ್ಸವದ ಎರಡನೇ ದಿನದಂದು ಶಾಸಕ ಸಿ.ಟಿ.ರವಿ ಸೇರಿದಂತೆ ದತ್ತಭಕ್ತರು ಚಿಕ್ಕಮಗಳೂರು ನಗರದಲ್ಲಿ ಮನೆ ಮನೆಗಳಿಗೆ ತೆರಳಿ ಪಡಿಯನ್ನು ಸಂಗ್ರಹಿಸಿದರು. ಇದೇ ಮೊದಲ ಬಾರಿಗೆ ಶೋಭಾಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವ ಮೂಲಕ ಇದು ಜನರ ಯಾತ್ರೆಯಾಗಿ ಪರಿವರ್ತನೆಗೊಂಡಿತು.

ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ದತ್ತಜಯಂತಿ ಉತ್ಸವಕ್ಕೆ ಇಂದು ತೆರೆ ಬಿದ್ದಿದೆ. ದತ್ತಪೀಠಕ್ಕೆ ಇಂದು ರಾಜ್ಯದ ವಿವಿಧೆಡೆಗಳಿಂದ ದತ್ತಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಹೊನ್ನಮ್ಮನಹಳ್ಳದಲ್ಲಿ ಸ್ನಾನ ಮಾಡಿ ದತ್ತಪೀಠಕ್ಕೆ ತೆರಳಿ, ದತ್ತಪಾದುಕೆಗಳ ದರ್ಶನ ಪಡೆದು, ನಂತರ ಹೊರವಲಯದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯದಲ್ಲಿ ಇರುಮುಡಿ ಸಮರ್ಪಿಸಿದ್ದಾರೆ.

ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ದತ್ತ ಜಯಂತಿ ಉತ್ಸವವನ್ನು ಯಶಸ್ವಿಗೊಳಿಸಿದರು.

Edited By : Nirmala Aralikatti
PublicNext

PublicNext

19/12/2021 10:18 pm

Cinque Terre

66.29 K

Cinque Terre

1

ಸಂಬಂಧಿತ ಸುದ್ದಿ