ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಮತಾಂತರ ನಿಷೇಧ ಆಗಬೇಕೆಂದು ಮೊದಲೇ ಹೇಳಿದ್ದೆ: ಶ್ರೀಶೈಲ ಜಗದ್ಗುರು

ಬಾಗಲಕೋಟೆ: ಮತಾಂತರ ನಿಷೇಧ ಕಾಯಿದೆ ಜಾರಿಯಾಗಬೇಕು ಎಂದು ಎಲ್ಲಕ್ಕಿಂತಲೂ ಮೊದಲು ಹೇಳಿದ್ದೇ ನಾವು. ಒತ್ತಾಯವಾಗಿ, ಆಮಿಷ ಒಡ್ಡುವ ಮೂಲಕ ಅಥವಾ ಬೆದರಿಸುವ ಮೂಲಕ ಮಾಡುವ ಮತಾಂತರವನ್ನು ಯಾವ ಕಾರಣಕ್ಕೂ ಒಪ್ಪಲಾಗದು ಎಂದು ಶ್ರೀಶೈಲದ ಚನ್ನಬಸವ ಸಿಧ್ಧರಾಮ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯಿದೆ ಜಾರಿ ಆಗಲೇಬೇಕು. ಒತ್ತಾಯದ ಮತಾಂತರ, ಆಮಿಷದ ಮತಾಂತರ, ಬಲವಂತದ ಮತಾಂತರ ನಡೆಯಬಾರದು. ಇದರಿಂದ ಅವರವರ ಸಹಜ ಬದುಕಿಗೆ ತೊಂದರೆಯಾಗುತ್ತದೆ. ಧರ್ಮವನ್ನ ವಿಸ್ತಾರ ಮಾಡಬೇಕು ಎನ್ನುವ ಮನಸ್ಥಿತಿಯಲ್ಲಿ, ಎಲ್ಲೋ ಒಂದು ಕಡೆ ಪ್ರತಿಯೊಬ್ಬರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಚ್ಯುತಿ ಬರುತ್ತೆ ಎನ್ನುವುದು ನಮ್ಮ ಭಾವನೆ.

ಮತಾಂತರ ಒಳ್ಳೆಯದಲ್ಲ ಮಾಡಬೇಡಿ ಎಂದರೆ ಮತ್ತೊಮದು ಹಾದಿಯಲ್ಲಿ ಮತಾಂತರ ಜಾರಿಗೆ ತರುವದು ಹೊಸದೇನಲ್ಲ. ಇದಕ್ಕೆ ಉದಾಹರಣೆ ಲವ್ ಜಿಹಾದ್. ಧರ್ಮಕ್ಕೆ ಮತಾಂತರ ಮಾಡಿಕೊಳ್ಳು ಉದ್ದೇಶಕ್ಕಾಗಿ, ಇಂತಹ ವಾಮ ಮಾಗ೯ ಅನುಸರಿಸುವದನ್ನ ಯಾವ ಧರ್ಮವೂ ಒಪ್ಪುವುದಿಲ್ಲ ಅದು ಸೂಕ್ತವೂ ಅಲ್ಲ ಎಂದು ಚನ್ನಬಸವ ಸಿಧ್ಧರಾಮ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

Edited By : Manjunath H D
PublicNext

PublicNext

15/12/2021 02:39 pm

Cinque Terre

46.61 K

Cinque Terre

9