ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಮಹಾರಾಷ್ಟ್ರ ಗಡಿಯಲ್ಲಿ ಅದ್ದೂರಿ ಜಾತ್ರೋತ್ಸವ, ಕೊರೋನಾ ನಿಯಮಕ್ಕಿಲ್ಲ ಕಿಮ್ಮತ್ತು

ವಿಜಯಪುರ: ಮಹಾರಾಷ್ಟ್ರದಲ್ಲಿ ಕೊರೋನಾ ಹೊಸ ತಳಿ ಓಮಿಕ್ರಾನ್ ಹರಡುವ ಆತಂಕದ ನಡುವೆಯೂ ಗಡಿ ಗ್ರಾಮದಲ್ಲಿ ಭರ್ಜರಿ ಜಾತ್ರೆ ನಡೆಯುತ್ತಿದೆ.

ಹೌದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಮಹಾರಾಷ್ಟ್ರ ಗಡಿಯ ಬರಡೋಲ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ಅದ್ದೂರಿ ಜಾತ್ರೆ ನಡೆಸಲಾಗಿದೆ. ನೀತಿ ಸಂಹಿತೆ ಹಾಗೂ ಕೊರೋನಾ ಹಿನ್ನೆಲೆ ಅದ್ದೂರಿ ಜಾತ್ರೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದರೂ, ಮಹಾರಾಷ್ಟ್ರದಿಂದ ಬಂದಂತಹ ಸಾವಿರಾರು ಜನರು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಮಾಸ್ಕ್ ಇಲ್ಲ, ಸಾಮಾಜಿಕ ಅಂತರವಿಲ್ಲ ಎಲ್ಲಾ ನಿಯಮಾವಳಿ ಗಾಳಿಗೆ ತೂರಿ ಗ್ರಾಮದ ರಾಜಕೀಯ ಮುಖಂಡರ ಸಮಕ್ಷಮದಲ್ಲೇ ಅದ್ದೂರಿ ಜಾತ್ರೆ ಮಾಡಲಾಗಿದೆ. ಮೊದಲೇ ಗಡಿಯಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರವಹಿಸಿದೆ ಆದರೂ ಈ ನಡುವೆ ಗಡಿಯಲ್ಲೆ ಸಾವಿರಾರು ಜನರನ್ನ ಸೇರಿಸಿ ಜಾತ್ರೆ ಮಾಡಿರುವುದು ಪ್ರಶ್ನಾರ್ಹವಾಗಿದೆ.

Edited By : Nagesh Gaonkar
PublicNext

PublicNext

11/12/2021 03:54 pm

Cinque Terre

28.21 K

Cinque Terre

1