ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಸರಳ, ಸಾಂಪ್ರದಾಯಿಕ ಅಮೋಘಸಿದ್ದೇಶ್ವರನ ಜಾತ್ರೆ, ಭಕ್ತರ ಸಂಖ್ಯೆ ಇಳಿಮುಖ

ಕೋವಿಡ್ ಭೀತಿಯ ನಡುವೆಯೇ ಜಿಲ್ಲೆಯ ಅರಕೇರಿ, ಜಾಲಗೇರಿ ಬಳಿಯ ಅಮೋಘಸಿದ್ದೇಶ್ವರನ ಜಾತ್ರೆ‌ ನಡೆಯುತ್ತಿದೆ. ಸರಳ ಹಾಗೂ ಸಾಂಪ್ರದಾಯಿಕ ಆಚರಣೆಗೆ ಮಾತ್ರ ಜಿಲ್ಲಾಡಳಿತ ಅವಕಾಶ ನೀಡಿದೆ.

ಜಿಲ್ಲಾಡಳಿತದ ಆದೇಶದಂತೆ ಆಡಳಿತ ಮಂಡಳಿ ಸರಳವಾಗಿ ಜಾತ್ರೆ ಆಚರಣೆ ಮಾಡುತ್ತಿದೆ. ಕರ್ನಾಟಕದಿಂದ ಆಗಮಿಸಿರುವ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿದ್ದು. ಗಡಿ ಭಾಗದಲ್ಲೇ ಮಹಾರಾಷ್ಟ್ರದ ಭಕ್ತರನ್ನು ತಪಾಸಣೆ ಮಾಡುತ್ತಿರುವ ಕಾರಣ ಭಕ್ತರಿಗೆ ಅವಕಾಶವಿಲ್ಲ.

ಐದು ಲಕ್ಷ ಜನ ಸೇರುವ ಜಾತ್ರೆಯಲ್ಲಿ ಕೇವಲ 10 ಸಾವಿರ ಜನ ಸೇರಿದ್ದು. ದೇವಸ್ಥಾನದ ಆಡಳಿತ ಮಂಡಳಿ ಜಾಗೃತಿ ಮೂಡಿಸಿರುವ ಕಾರಣ ಭಕ್ತರ ಸಂಖ್ಯೆ ಕಡಿಯೆಯಾಗಿದೆ.

ಜಾತ್ರೆಯಲ್ಲಿ ಕೋವಿಡ್ ನಿಯಮಗಳ ಪ್ರಕಾರ ಮಾಸ್ಕ್, ಸಾಮಾಜಿಕ ಅಂತರ ಮರೆತು ಭಕ್ತಾದಿಗಳು ಜಾತ್ರೆಯಲ್ಲಿ ಓಡಾಡುತ್ತಿದ್ದಾರೆ.

ಆದ್ರೆ ಈ‌ ಹಿಂದಿನ ಜಾತ್ರೆಗೆ ಹೋಲಿಸಿದರೆ ಭಕ್ತಾಧಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು.

ಪ್ರತಿವರ್ಷ ಅಮವಾಸ್ಯೆ ದಿನ ಬಂದ ಭಕ್ತರು ಐದು ದಿನಗಳ ಕಾಲ ಇಲ್ಲೆ ಉಳಿದುಕೊಳ್ಳುತ್ತಿದ್ದರು.

ಆದರೆ ಈ ವರ್ಷ ಭಕ್ತರು ಕೇವಲ ದರ್ಶನ ಮಾಡಿಕೊಂಡು ಹೋಗಲು ಅವಕಾಶದ ವ್ಯವಸ್ಥೆ ಮಾಡಲಾಗಿದೆ. ವಸತಿ, ಪ್ರಸಾದ ಸೇರಿದಂತೆ ಯಾವುದಕ್ಕೂ ಆಡಳಿತ ಮಂಡಳಿ ಅವಕಾಶ ನೀಡಿಲ್ಲ.

Edited By : Shivu K
PublicNext

PublicNext

05/12/2021 10:19 am

Cinque Terre

42.61 K

Cinque Terre

0