ವಿಜಯಪುರ: ಕ್ರಿಶ್ಚಿಯನ್ ಮತಾಂತರ ಹಳ್ಳಿ ಹಳ್ಳಿಯಲ್ಲಿ ನಡೆಯುತ್ತಿದೆ. ಇದುವರೆಗೂ ಬಡವರು, ಅನಕ್ಷರಸ್ಥರು, ಮುಂತಾದವರನ್ನು ಮತಾಂತರ ಮಾಡುತ್ತಿದ್ದರು.ಇದೀಗ ಎಲ್ಲಾ ಸಮುದಾಯ, ವರ್ಗಗಳನ್ನು ಮತಾಂತರ ಮಾಡುತ್ತಿದ್ದಾರೆ ಎಂದು ವಿಜಯಪುರದಲ್ಲಿ ಶ್ರೀ ರಾಮಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿಕೆ ಕೊಟ್ಟಿದ್ದಾರೆ.
ದಾವಣಗೆರೆ, ಚಿತ್ರದುರ್ಗದ ಭಾಗದಲ್ಲಿ ಒಂದು ಲಕ್ಷಕ್ಕೂ ಅಧಿಕ ಲಿಂಗಾಯತರನ್ನು ಮತಾಂತರ ಮಾಡಲಾಗಿದೆ. ಶಾಮನೂರು ಶಿವಶಂಕರ ಅವರು ಮತಾಂತರ ಆದವರನ್ನು ವಾಪಸ್ ತರುವಂತೆ ಸಮಾಜಕ್ಕೆ ಪತ್ರ ಬರೆದಿದ್ದಾರೆ, ನಾನು ಅದನ್ನು ಸ್ವಾಗತಿಸುತ್ತೇನೆ.
ಮತಾಂತರ ಮಾಡುವುದು ದೇಶದ್ರೋಹದ ಕೆಲಸ.
ಲ್ಯಾಂಡ್ ಎನ್ನುವಂತಹದ್ದನ್ನು ಕನ್ವರ್ಟ್ ಮಾಡಿ, ಕ್ರಿಶ್ಚಿಯನ್ ಲ್ಯಾಂಡ್ ಎಂದು ಮಾಡ್ತಿದ್ದಾರೆ ಎಂದು ದೂರಿದರು.
ವಿಜಯಪುರ ಜಿಲ್ಲೆ ಸೇರಿದಂತೆ ಹಲವೆಡೆ ತಾಂಡಾಗಳನ್ನು ಪೂರ್ತಿಯಾಗಿ ಮತಾಂತರ ಮಾಡ್ತಿದ್ದಾರೆ. ಅವರನ್ನು ವಾಪಸ್ ತರುವ ಕೆಲಸ ಸೇವಾಲಾಲ್ ಸ್ವಾಮೀಜಿಗಳು ಮಾಡ್ತಿದ್ದಾರೆ.
ಬೀದರ, ಕಲಬುರಗಿ ಭಾಗದಲ್ಲಿ ಶೇಕಡಾ 60% ರಷ್ಟು ಮಾದಿಗ ಸಮಾಜದವರನ್ನು ಮತಾಂತರ ಮಾಡಿದ್ದಾರೆ.ಮತಾಂತರ ಮಾಡುವವರಿಗೆ ಶ್ರೀ ರಾಮಸೇನೆ ಎಚ್ಚರಿಕೆ ಕೊಡುತ್ತಿದೆ. ಇದೇ ಕೆಲಸ ಮುಂದುವರೆಸಿದ್ರೆ ಸಿಕ್ಕಸಿಕ್ಕಲ್ಲಿ ಒದೆಯಬೇಕಾಗುತ್ತದೆ ಎಂದು ಪುಲ್ ಗರಂ ಆದರು ಮುತಾಲಿಕ್.
ಮಠಾಧೀಶರೂ ಸಹ ಮಠವನ್ನು ಬಿಟ್ಟು ಹೊರಗೆ ಬಂದು ಕೇರಿಗಳಿಗೆ ಭೇಟಿ ನೀಡಿ, ಮತಾಂತರ ಆದವರನ್ನು ವಾಪಸ್ ತರುವ ಕೆಲಸ ಮಾಡಬೇಕು.
ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಆರು ಗಂಟೆಯ ವರೆಗೆ ಯಾವುದೇ ಮೈಕ್ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆರ್ಡರ್ ಮಾಡಿದೆ, ಆದ್ರೆ ಬೆಳಗ್ಗೆ ಐದು ಗಂಟೆಗೆ ನಮಾಜ್ ಶುರು ಆಗುತ್ತೆ, ಇದು ನ್ಯಾಯಾಲಯ ಆದೇಶ ಉಲ್ಲಂಘನೆ ಆಗಿದೆ.ಆದ್ರೆ ಪೊಲೀಸರು, ಕಾನೂನು ಬಾಯಿ ಮುಚ್ಚಿಕೊಂಡು ಕುಂತಿವೆ ಎಂದರು.
ಸುಪ್ರೀಂ ಕೋರ್ಟ್ ಆರ್ಡರ್ ಇದೆ ಎಂದು ನಂಜನಗೂಡ ದೇವಸ್ಥಾನ ಒಡೆಯುತ್ತಾರೆ. ಅದೇ ಸುಪ್ರೀಂ ಕೋರ್ಟ್ ಆರ್ಡರ್ ಇದ್ರೂ ಯಾಕೆ ಮಸೀದಿಯಲ್ಲಿನ ಮೈಕ್ ಬಂದ್ ಮಾಡ್ತಿಲ್ಲ. ಈ ರೀತಿ ಕಾನೂನು ಉಲ್ಲಂಘನೆ ಆಗಿದ್ದನ್ನು ತಡೆಯಬೇಕು ಎಂದು ಈಗಾಗಲೇ ರಾಜ್ಯದ ಎಲ್ಲ ತಹಶೀಲ್ದಾರ್ ಗಳಿಗೆ ಮನವಿ ಕೊಟ್ಟಿದ್ದೇವೆಂದು ಹೇಳಿದರು.
ಇನ್ಮುಂದೆ ಎಲ್ಲ ಡಿಸಿ ಕಚೇರಿಗಳ ಎದುರು ಹೋರಾಟ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಗಲಾಟೆಗಳಾಗಿ ಅನಾಹುತಗಳು ಆಗುವ ಮೊದಲು ಡಿಸಿಗಳು ಈ ವಿಚಾರವನ್ನು ಹದ್ದು ಬಸ್ತಿನಲ್ಲಿ ಇಡಬೇಕು ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ಕೊಟ್ಟಿದ್ದಾರೆ.
PublicNext
25/11/2021 01:54 pm