ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಕನಕದಾಸರ ಜಯಂತೋತ್ಸವಕ್ಕೆ ಅವಮಾನ- ರಸ್ತೆ ತಡೆದು ಪ್ರತಿಭಟನೆ

ಹಾವೇರಿ: ಕನಕದಾಸರ ಜಯಂತೋತ್ಸವದ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಬಣ್ಣದ ಹಾಳೆ, ಪ್ಲೇಕ್ಸ್, ಬ್ಯಾನರ್‌ಗಳನ್ನು ದುಷ್ಕರ್ಮಿಗಳು ಹರಿದು ಹಾಕಿದ ಘಟನೆ ಹಾವೇರಿ ಜಿಲ್ಲೆಯ ಹನಮರಹಳ್ಳಿಯಲ್ಲಿ ನಡೆದಿದೆ. ಇದರಿಂದ ಕೋಪಗೊಂಡ ಹನಮರಹಳ್ಳಿ ಗ್ರಾಮಸ್ಥರು ರಸ್ತೆ ತಡೆದು ಬೃಹತ್ ಮಟ್ಟದ ಪ್ರತಿಭಟನೆ ನಡೆಸಿದ್ದಾರೆ.

ಹನಮರಹಳ್ಳಿಯಲ್ಲಿ ಕನಕದಾಸರ ಜಯಂತಿಯ ಅಂಗವಾಗಿ ನಿನ್ನೆ ರಾತ್ರಿಯೇ ಬಾವುಟ ಹಾಗೂ ವಿವಿಧ ಅಲಂಕಾರಿಕ ವಸ್ತುಗಳನ್ನು ಕಟ್ಟಿ ಶೃಂಗರಿಸಲಾಗಿತ್ತು. ಆದರೆ ದುಷ್ಕರ್ಮಿಗಳು ಇದನ್ನು ಹರಿದು ಹಾಕುವ ಮೂಲಕ ವಿಕೃತಿ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಶಿಗ್ಗಾಂವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ದಾಸ ಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಕೋಮುವಾದವನ್ನು ಹುಟ್ಟು ಹಾಕಲು ಇಂತಹ ಕೃತ್ಯವನ್ನು ಎಸಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Edited By : Manjunath H D
PublicNext

PublicNext

22/11/2021 11:40 am

Cinque Terre

25.45 K

Cinque Terre

0