ಲಕ್ಷ್ಮೇಶ್ವರ : ತಿರುಪತಿ ವೆಂಕಟೇಶ್ವರ ಅಂದ್ರೇ ಈ ಭಕ್ತ ಜನತೆಗೆ ಅದೇನೋ ಹೊಸ ಭಕ್ತಿ ಹೊಸ ಸಾಕ್ಷಾತ್ಕಾರ, ತಿರುಪತಿ ವೆಂಕಟೇಶ್ವರನ ದರ್ಶನಕ್ಕೆಂದೇ ಕರ್ನಾಟಕದಿಂದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗೆ ಪ್ರತಿವರ್ಷ ಭೇಟಿ ನೀಡುವ ಕರ್ನಾಟಕದ ಭಕ್ತರ ಸಂಖ್ಯೆಗೇನು ಕಡಿಮೆಯಿಲ್ಲ ಬಿಡಿ.
ಈಗಾಗಲೇ ಅದೆಷ್ಟೋ ಜನ ಭಕ್ತಾದಿಗಳು ಆಂಧ್ರಪ್ರದೇಶಕ್ಕೆ ಹೋಗಿ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ್ರೇ, ಇನ್ನೂ ಅದೆಷ್ಟೋ ಜನ ತಮ್ಮ ವೈಯಕ್ತಿಕ ಜೀವನ ಹಾಗೂ ಸಮಯದ ಅಭಾವ ಆರ್ಥಿಕ ಪರಿಸ್ಥಿತಿಗಳ ಸಮಸ್ಯೆಯಿಂದ ದರ್ಶನದಿಂದ ದೂರವಾಗಿ ಇಂದೋ ನಾಳೆ ವೆಂಕಟೇಶ್ವರನ ದರ್ಶನ ಪಡೆಯಲಿದ್ದಾರೆ.
ಹೀಗೆ ವೆಂಕಟೇಶ್ವರನ ದರ್ಶನ ಮಾಡಬೇಕು ಎನ್ನುವ ಭಕ್ತರಿಗಾಗಿಯೇ ತಿರುಪತಿ ವೆಂಕಟೇಶ್ವರ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯಂತೆ, ಮುದ್ರಣಕಾಶಿ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ 2012ರಲ್ಲೇ ನೆಲೆ ನಿಂತು ತನ್ನ ನಂಬಿ ಬಂದ ಭಕ್ತರನ್ನು ಉದ್ಧರಿಸುತ್ತಿದ್ದಾನೆ.
ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಭಕ್ತರು ತಿರುಪತಿ ವೆಂಕಟೇಶ್ವರನ ದರ್ಶನ ಮಾಡಬೇಕೆದ್ರೇ ಸನಿಹದಲ್ಲಿ ಎಲ್ಲೂ ಆತನ ಸನ್ನಿಧಿಯಿಲ್ಲಾ. ದರ್ಶನಕ್ಕೆ ಸೀದಾ ಆಂಧ್ರಪ್ರದೇಶಕ್ಕೆ ಹೋಗ್ಬೇಕು, ಇದನ್ನರಿತ ದಿ.ವೆಂಕಪ್ಪ ಅಗಡಿಯವರು ತಮ್ಮ ಸ್ವಂತ ಜಮೀನು ಹಾಗೂ ಹಣದಲ್ಲಿ ತದ್ರೂಪಿ ಆಂಧ್ರಪ್ರದೇಶದ ವೆಂಕಟೇಶ್ವರ ದೇವಾಲಯವನ್ನೇ ಹೋಲುವ ದೇವಸ್ಥಾನವನ್ನು ಲಕ್ಷ್ಮೇಶ್ವರದಲ್ಲಿ ನಿರ್ಮಿಸಿ ಹುಟ್ಟೂರಿಗೆ ತಮ್ಮದೆ ಕೊಡುಗೆ ನೀಡಿದ್ದಾರೆ.
ಈ ದೇವಸ್ಥಾನ ಸಂಪೂರ್ಣ ಕಲ್ಲಿನಿಂದಲೇ ನಿರ್ಮಾಣವಾಗಿದ್ದು, ದೇವಾಲಯದಲ್ಲಿ ಪ್ರಸನ್ನದೇವತೆ, ಮೈಲಾರಲಿಂಗೇಶ್ವರ, ಭೂದೇವಿ, ಶ್ರೀದೇವಿ ಸನ್ನಿದಿಗಳಿವೆ.
ಇನ್ನೂ ವಿಶೇಷವಾಗಿ ಶರನ್ನವರಾತ್ರಿಗೆ ಲಕ್ಷ್ಮೇಶ್ವರದ ವೆಂಕಟೇಶ್ವರ ದೇವಾಲಯದಲ್ಲಿ ಒಂಬತ್ತು ದಿನ ನಂದಾದೀಪ ಕಾರ್ಯಕ್ರಮದ ಜೊತೆ ವೆಂಕಟೇಶ್ವರನಿಗೆ ದಶಾವತಾರ ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ನೀಡಿ ಬಂದ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆ ಏರ್ಪಟ್ಟಿರುತ್ತದೆ.
ಇದರಲ್ಲದೆ ಪ್ರತಿ ಅಮಾವಾಸ್ಯೆ ಹುಣ್ಣಿಮೆ ಹಬ್ಬ ಹರಿದಿನಗಳಲ್ಲಿ ಸೇರಿದಂತೆ ಸಾಮಾನ್ಯ ದಿನಗಳಲ್ಲೂ ವೆಂಕಟೇಶ್ವರನ ಸನ್ನಿಧಿಯಲ್ಲಿ ಭಕ್ತರು ದುಂಡು ತುಂಬಿರುತ್ತೇ. ನೀವೂ ಸಹ ಅತಿ ಸನಿಹದಲ್ಲಿ ವೆಂಕಟೇಶ್ವರನ ದರ್ಶನ ಮಾಡಬೇಕಂದ್ರೇ ಇಂದೇ ಲಕ್ಷ್ಮೇಶ್ವರಕ್ಕೆ ಬನ್ನಿರಿ.
PublicNext
20/11/2021 08:54 am