ಗದಗ: ಹಂಸಲೇಖ ಅವ್ರೇ ನೀವು ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ ನೀಡಿದ ಬಳಿಕ ನಿಮ್ಮ ಹೆಂಡತಿ ನಿಮ್ಮನ್ನ ಬೈದ್ರೂ ಅಂತೀರಾ. ಅವರು ಬೈಯೋ ಬದಲು ನಿಮ್ಮನ್ನ ಒದ್ದು ಹೊರಗೆ ಹಾಕಬೇಕಿತ್ತು ಎಂದು ಗದಗನಲ್ಲಿ ಶ್ರೀ ರಾಮ್ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್,ಹಂಸಲೇಖ ವಿರುದ್ಧ ಕಿಡಿಕಾರಿದ್ದಾರೆ.
ಪೇಜಾವರ ಶ್ರೀಗಳು ಅಸ್ಪೃಶ್ಯತೆ ಹೋಗಲಾಡಿಸಲು ಹೋರಾಡಿದವ್ರು.ಅವರ ವಿರುದ್ಧ ಹಂಸಲೇಖ ವಿಕೃತಿಯಿಂದ ಮಾತನಾಡಿದ್ದಾರೆ.ಇವರ ಈ ಮಾತನ್ನ ನೋಡಿದ್ರೆ ಒಳಗೆ ಏನೋ ತುಂಬಿದೆ ಅಂತಲೇ ಪ್ರಮೋದ್ ಮುತಾಲಿಕ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಹಂಸಲೇಖ ಅವರಿಗೆ ಇಷ್ಟು ವಯಸ್ಸಾಗಿದೆ. ಏನು ಮಾತನಾಡಬೇಕು ಅಂತ ಬಿದ್ದು ಇಲ್ವಾ. ಚಪ್ಪಲಿಯಲ್ಲಿ ಹೊಡೆದು ಕ್ಷಮೆ ಕೇಳಿದರೆ ಎಷ್ಟು ಸರಿ. ನನ್ನ ಹೇಳಿಕೆ ಬಳಿಕ ನನ್ನ ಹೆಂಡ್ತಿ ಬೈದಳು ಅಂತ ನೀವೇ ಹೇಳ್ತೀರಾ. ಅವರು ಬೈದು ಒದ್ದು ಹೊರಗೆ ಹಾಕಬೇಕಿತ್ತು ಸುಮ್ನೆ ಬಿಟ್ಟಿದ್ದಾರೆ ಅಂತಲೇ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
17/11/2021 02:14 pm