ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಂಸಲೇಖ ನೋಡಿದ ಪ್ರಪಂಚ ಸೀಮಿತವಾದದ್ದು; ಪರ್ಯಾಯ ಶ್ರೀಗಳು

ಉಡುಪಿ: ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದೀಗ ಪರ್ಯಾಯ ಶ್ರೀಗಳು ಪ್ರತಿಕ್ರಿಯೆ ನೀಡಿ, ಹಂಸಲೇಖ ಅವರ ವಿಚಾರಗಳ ಬಗ್ಗೆ ನನಗೆ ಕನಿಕರ ಇದೆ ಎಂದು ಹೇಳಿದ್ದಾರೆ.

ಕೃಷ್ಣಮಠದಲ್ಲಿ ಪ್ರತಿಕ್ರಿಯೆ ನೀಡಿದ ಶ್ರೀಗಳು, "ಮನುಷ್ಯನಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳು ಇರುತ್ತವೆ. ಅವರವರ ದೃಷ್ಟಿಕೋನ ಅವರಿಗೆ ಸೀಮಿತವಾದದ್ದು. ಅವರು ನೋಡಿದ ಪ್ರಪಂಚ ಸೀಮಿತವಾದದ್ದು. ಹೀಗಾಗಿ ಪೇಜಾವರ ಶ್ರೀಗಳನ್ನು ಅವರು ನಿಂದಿಸಿದ ಬಗ್ಗೆ ಕನಿಕರ ಇದೆ. ಬೇರೇನೂ ಹೇಳಲಾರೆ" ಎಂದು ನುಡಿದರು.

Edited By : Manjunath H D
PublicNext

PublicNext

15/11/2021 01:37 pm

Cinque Terre

28.89 K

Cinque Terre

3