ಉತ್ತರಾಖಂಡ: ಭಾರಿ ಮಳೆ, ಭಾರಿ ಹಿಮದಿಂದಲೇ ಇಲ್ಲಿಯ ಜನ ತತ್ತರಿಸಿದ್ದರು. ಆದರೆ ಈಗ ಇಲ್ಲಿಯ ವಾತಾವರಣ ಸುಧಾರಿಸಿದೆ. ಜನ ಓಡಾಡಕ್ಕೆ ಸದ್ಯಕ್ಕೆ ಏನೂ ತೊಂದರೆ ಇಲ್ಲ. ಅದಕ್ಕೇನೆ ದೀಪಾವಳಿ ಹಬ್ಬದ ಪ್ರಯುಕ್ತ ಇಲ್ಲಿಯ ಬದ್ರಿನಾಥ್ ದೇವಾಲಯ ಈಗ ಹೂವಿನಿಂದ ಅಲಂಕೃತಗೊಂಡಿದೆ.10 ಕ್ವಿಂಟಾಲ್ ನಷ್ಟು ವಿವಿಧ ಹೂ ಗಳನ್ನ ಅಲಂಕಾರಕ್ಕೆ ಬಳಸಲಾಗಿದೆ. ಇದರಿಂದ ಇಡೀ ದೇವಸ್ಥಾನದ ರೂಪ ಈಗ ಹೂಮಯ ಆಗಿದೆ. ನೀವೂ ನೋಡಿ.
PublicNext
03/11/2021 01:55 pm