ಚಿಕ್ಕಮಗಳೂರು: ಕರ್ನಾಟಕದ ಹಲವೆಡೆ ಹಲವು ವಿಶಿಷ್ಟ ಆಚರಣೆಗಳಿವೆ. ಆ ಆಚರಣೆಗಳ ಮೂಲಕವೇ ಉತ್ಸವ, ಜಾತ್ರೆಗಳು ಫೇಮಸ್ ಆಗಿರುತ್ತವೆ. ಅದರಂತೆ ಕಾಫಿನಾಡಿನಲ್ಲಿ ಬಿಂಡಿಗ ದೇವಿರಮ್ಮ ಜಾತ್ರಾ ಮಹೋತ್ಸವವೂ ಮಲೆನಾಡು ಭಾಗದಲ್ಲಿ ಪ್ರಸಿದ್ಧಿ ಹೊಂದಿದೆ. ಕಾರಣ ಜಾತ್ರೆ ವೇಳೆ ನಡೆಯುವ ವಿಶಿಷ್ಟ ಆಚರಣೆಗಳು. ಸದ್ಯ ಈ ಜಾತ್ರೆಗೆ ಚಾಲನೆ ದೊರೆತಿದೆ.
ಹೌದು..ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗದ ದೇವಿರಮ್ಮ ದರ್ಶನ ಮಾಡಲು ಜನಸಾಗರವೇ ಹರಿದು ಬರುತ್ತೆ. ಮಧ್ಯರಾತ್ರಿಯಿಂದಲೇ ಭಕ್ತರು ಮೂರು ಸಾವಿರ ಅಡಿ ಎತ್ತರದ ಬೆಟ್ಟ ಏರುತ್ತಾರೆ. ಬೆಟ್ಟದ ಮೇಲೆ ನೆಲೆಸಿರುವ ದೇವಿರಮ್ಮ ತಾಯಿ ವರ್ಷಕ್ಕೊಮ್ಮೆ ದರ್ಶನ ನೀಡುತ್ತಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದು ದರ್ಶನ ಪಡೆಯುತ್ತಿರುವ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ
PublicNext
03/11/2021 12:53 pm