ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮತಾಂತರ ವಿರೋಧಿ ಆಂದೋಲನ; ಪೇಜಾವರ ಶ್ರೀ ಜೊತೆ ವಿಹಿಂಪ ಕಾರ್ಯಾಧ್ಯಕ್ಷರ ಸಮಾಲೋಚನೆ

ಬೆಂಗಳೂರು: ದೇಶದಲ್ಲಿ ಕ್ರೈಸ್ತ ಮತಾಂತರ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿವೆ. ಇದರ ವಿರುದ್ಧ ವಿಶ್ವ ಹಿಂದೂ ಪರಿಷತ್ ರಾಷ್ಟ್ರವ್ಯಾಪಿ ಆಂದೋಲನಕ್ಕೆ ಸಜ್ಜಾಗಿದ್ದು ಇದರ ನೇತೃತ್ವವನ್ನು ಮಠಾಧೀಶರು, ಸಾಧು ಸಂತರು, ಧರ್ಮಾಧಿಕಾರಿಗಳು ವಹಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.

ಈ ಸಂಬಂಧ ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಈ ಹಿಂದೆಯೂ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕಾಲಕಾಲಕ್ಕೆ ಹಿಂದೂ ಸಮಾಜಕ್ಕೆ ಎದುರಾದ ಸಂಕಟ ಸವಾಲುಗಳ ಸಂದರ್ಭ ಸ್ವಯಂಸ್ಫೂರ್ತಿಯಿಂದ ಮುಂಚೂಣಿಯಲ್ಲಿ ನಿಂತು ಹಿಂದೂ ಸಮಾಜಕ್ಕೆ ಸಮರ್ಥ ನೇತೃತ್ವ ಮತ್ತು ಮಾರ್ಗದರ್ಶನ ನೀಡಿರುವುದನ್ನು ಸ್ಮರಿಸಿರುವ ಅಲೋಕ್ ಕುಮಾರ್, ಇದೀಗ ಅವರ ಶಿಷ್ಯರಾಗಿರುವ ತಾವೂ ಆ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡಬೇಕೆಂದು ವಿನಂತಿಸಿದರು.

ಅದೇ ರೀತಿ ದೇಶಾದ್ಯಂತ ಸರ್ಕಾರಿ ಸ್ವಾಮ್ಯದಲ್ಲಿರುವ ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ಸ್ವಾಯತ್ತಗೊಳಿಸುವ ನಿಟ್ಟಿನಲ್ಲಿಯೂ ವಿಹಿಂಪ ವಿಸ್ತೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಅದರಲ್ಲೂ ಮಠಾಧಿಪತಿಗಳು ಮಾರ್ಗದರ್ಶನ ಮಾಡುವಂತೆಯೂ ಮನವಿ ಮಾಡಿದರು.

ಶ್ರೀಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲೋಕ್ ಕುಮಾರ್ ಅವರನ್ನು ಶ್ರೀಗಳು ಆಶೀರ್ವದಿಸಿದರು. ವಿಹಿಂಪ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಮತ್ತು ಮುಖಂಡ ಬಸವರಾಜ್ ಉಪಸ್ಥಿತರಿದ್ದರು.

Edited By : Manjunath H D
PublicNext

PublicNext

25/10/2021 12:56 pm

Cinque Terre

39.49 K

Cinque Terre

3