ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು : ಮದ್ಯ ಕದ್ದವನಿಗೆ ಶಿಕ್ಷೆ ಕೊಟ್ಟ ಕೊರಗಜ್ಜ : ವಿಚಿತ್ರವಾದ್ರು ಇದು ಸತ್ಯ

ಕೊಡಗು : ಭಕ್ತಿಯಿಂದ ಏನೇ ಬೇಡಿದ್ರು ವರವನ್ನ ನೀಡುತ್ತೆ ಆ ದೈವ. ಈ ದೈವದ ಬಗ್ಗೆ ಮಂಗಳೂರಿನಲ್ಲಿ ಬಹಳನೆ ನಂಬಿಕೆ ಇದೆ. ಇದಕ್ಕೆ ನಿದರ್ಶನ ಎಂಬಂತೆ ಒಂದಷ್ಟು ಪವಾಡಗಳು ನಡೆದಿದೆ. ಅದೇ ರೀತಿ ಇದೀಗ ಕೊಡಗಿನಲ್ಲಿ ಆ ದೇವದ ಶಕ್ತಿ ಪ್ರೂವ್ ಆಗಿದ್ದು, ಅಚ್ಚರಿ ಮೂಡುವಂತೆ ಮಾಡಿದೆ.

ಹೌದು ಕೊರಗಜ್ಜನಿಗೆ ಹರಕೆಯಾಗಿ ಒಪ್ಪಿಸಿದ ಮದ್ಯವನ್ನ ವ್ಯಕ್ತಿ ಒಬ್ಬ ಕದ್ದು ತೆಗೆದುಕೊಂಡು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ಹರಕೆ ಕಟ್ಟಿದ ಮದ್ಯ ಸೇವಿಸಿದವನಿಗೆ ನಾನಾ ತೊಂದರೆಗಳು ಶುರುವಾಗುತ್ತಿದ್ದಂತೆ ತಪ್ಪು ಕಾಣಿಕೆ ಸಲ್ಲಿಸುವುದಾಗಿ ಬೇಡಿಕೊಳ್ಳುತ್ತಾನೆ. ಆ ಮೇಲೆ ಆ ವ್ಯಕ್ತಿಯಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ. ಎನ್ನುತ್ತಿದ್ದಾರೆ ಅಲ್ಲಿನ ಜನ.

ಹೀಗೊಂದು ದೃಶ್ಯ ಕಂಡು ಬಂದಿದ್ದು ಕೊಡಗು ಜಿಲ್ಲೆ ಮಡಿಕೇರಿ ಸಮೀಪದ ಕೆದಕಲ್ ಗ್ರಾಮದಲ್ಲಿ. ಭಕ್ತರೊಬ್ಬರು ನನ್ನ ಗಂಡ ಕುಡಿಯೋದನ್ನ ಬಿಟ್ರೆ ಮದ್ಯವನ್ನು ಹರಕೆಯಾಗಿ ಕೊಡುತ್ತೇನೆ ಎಂದು ಹರಕೆ ಕಟ್ಟಿ ಮದ್ಯವನ್ನು ಕೊಟ್ಟಿದ್ದ ಮದ್ಯವನ್ನು ಗ್ರಾಮ ನಿವಾಸಿ ಕದ್ದು ಕುಡಿದು ತೊಂದರೆಗೆ ಸಿಲುಕಿದ್ದಾನೆ.

ನಂತರ ದೇವರ ಮುಂದೆ ಇಟ್ಟಿದ್ದ ಮದ್ಯವನ್ನು ಕದ್ದಿದ್ದನ್ನು ಒಪ್ಪಿಕೊಂಡು ಹರಕೆ ತೀರಿಸಿದ ನಂತ್ರ ಮುಚ್ಚಿದ್ದ ಆತನ ಕಣ್ಣುಗಳು ಸ್ವಲ್ಪ ಸ್ವಲ್ಪ ತೆರೆಯುತ್ತಿವೆ.

ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ದೈವಿ ಶಕ್ತಿ ಕಡಿಮೆಯಾಗುತ್ತಿದೆ ಎಂದು ದೈವ ಭಕ್ತಿಯಿಂದ ದೂರ ಉಳಿದವರಿಗೆ ಕೊಡಗಿನಲ್ಲಿ ನಡೆದ ಇದೊಂದು ಘಟನೆ ಅಚ್ಚರಿ ಮೂಡುವಂತೆ ಮಾಡಿದೆ.

Edited By : Shivu K
PublicNext

PublicNext

23/10/2021 10:59 am

Cinque Terre

32.6 K

Cinque Terre

6