ಪರಶಿವನ ಆಯುಧ ಯಾವುದು? ದೇವಿ ದೇವತೆಗಳ ಆಯುಧ ಯಾವುದು ? ಅದಕ್ಕೆ ಉತ್ತರ ಒಂದೇ. ಈ ವಿಷಯ ಏನಪ್ಪ ಅಂದ್ರೆ, ಉತ್ತರ ಪ್ರದೇಶ ಮೂಲದ ಅಪಸ್ಟರಾನ್ ಪ್ರೈವೇಟ್ ಲಿಮಿಟೆಡ್ ಕಂಪನಿ ಈಗೊಂದು ಮಾರಕವಲ್ಲದ ತ್ರಿಶೂಲ್ ರೆಡಿ ಮಾಡಿದೆ. ಜೊತೆಗೆ ಸಾಪ್ಪರ್ ಪಂಚ್ ಅನ್ನೂ ಸಿದ್ಧಗೊಳಿಸಿದೆ. ಇವುಗಳ ಡೆಮೋ ಕೂಡ ಕೊಟ್ಟಿದೆ. ನೋಡಿ
ತ್ರಿಶೂಲ್ ಅಂದಾಕ್ಷಣ ಸಣ್ಣಗೆ ಭಯ ಹುಟ್ಟಿಕೊಳ್ಳುತ್ತದೆ. ಆದರೆ ಈಗ ನೀವು ನೋಡ್ತಿರೋ ತ್ರಿಶೂಲ್ ನೋಡಲು ಮಾತ್ರ ಮಾರಕಾಸ್ತ್ರ ಅನಿಸುತ್ತದೆ. ಇದರಿಂದ ಏಟು ತಿಂದ ವ್ಯಕ್ತಿ ಮೇಲೆ ತಾತ್ಕಾಲಿಕವಾಗಿಯೇ ಪರಿಣಾಮ ಬೀರುತ್ತದೆ ಹೊರತು, ಗಂಭೀರವಾದ ಗಾಯಗಳಾಗುವುದಿಲ್ಲ. ಅದನ್ನ ನಾವ್ ಹೇಳ್ತೀಲ್ಲ. ಕಂಪನಿಯ ಈ ವ್ಯಕ್ತಿ ಹೇಳಿದ್ದಾರೆ. ಇದನ್ನ ನೋಡಿದಾಕ್ಷಣ ಸಾಮಾನ್ಯ ಜನ ಇದನ್ನ ಯಾಕೆ ಬಳಸಬೇಕು ಅನ್ನೋ ಪ್ರಶ್ನೆನೂ ಇದೆ.ಇರಲಿ, ಸದ್ಯ ಈ ತ್ರಿಶೂಲ್ ಎಲ್ಲರ ಗಮನ ಸೆಳೆಯುತ್ತಿದೆ.
PublicNext
18/10/2021 04:22 pm