ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವರಾತ್ರಿಯಲ್ಲಿ ಮುಸ್ಲಿಂ ಕುಟುಂಬದಿಂದ ದೇವಿಗೆ ಮೊದಲ ಪೂಜೆ!

ಸಾಗರ: ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ. ಸರ್ವ ಧರ್ಮದವರನ್ನು ಸಮಾನವಾಗಿ ಕಾಣುವ ನಮ್ಮ ದೇಶದಲ್ಲಿ ಎಲ್ಲರೂ ಒಂದೇ ಎನ್ನುವ ಬಾವನೆ ನಿಜಕ್ಕೂ ಏಕತೆಯ ಪ್ರತಿಕ. ಸದ್ಯ ನಾಡಿನಲ್ಲಿ ನವರಾತ್ರಿಯ ಸಂಭ್ರಮ ಈ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಇಲ್ಲಿನ ಶ್ರೀರಾಂಪುರ ಬಡಾವಣೆಯಲ್ಲಿನ ಭಗವತಿ ಅಮ್ಮನವರ ದೇವಸ್ಥಾನವನ್ನು ಸ್ಥಾಪಿಸಿದ್ದಲ್ಲದೆ ಕಾಲಾನಂತರ ಇಂದಿಗೂ ಅವರ ಕುಟುಂಬದವರು ನವರಾತ್ರಿ ಸಂದರ್ಭದಲ್ಲಿ ಶ್ರೀದೇವಿಗೆ ಮೊದಲ ಪೂಜೆ ಸಲ್ಲಿಸುವ ಪದ್ಧತಿ ಸಾಗರದ ವೈಶಿಷ್ಟ್ಯವಾಗಿ ದಾಖಲಾಗಿದೆ.

ಸುಮಾರು 50 ವರ್ಷಗಳ ಹಿಂದೆ ರೈಲ್ವೆ ಇಲಾಖೆಯಲ್ಲಿ ನೌಕರರಾಗಿದ್ದ ಇಬ್ರಾಹಿಂ ಷರೀಫ್ ಎಂಬುವವರಿಗೆ ಕನಸಿನಲ್ಲಿ ದೇವಿ ಆಕೃತಿ ಕಾಣಿಸಿಕೊಂಡಿದ್ದರಿಂದ ಭಗವತಿ ಅಮ್ಮನವರ ದೇವಸ್ಥಾನ ಸ್ಥಾಪಿಸಿ, ಆರಾಧನೆ ಮಾಡಿಕೊಂಡಿದ್ದರು. ಇಬ್ರಾಹಿಂ ಅವರ ನಿಧನಾನಂತರ ಅವರ ಪುತ್ರ ಬುಡೇನ್ ಸಾಬ್ ಮತ್ತು ಕುಟುಂಬದವರು ಈ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಈ ಬಾರಿ ಸಹ ಷರೀಫ್ ಅವರ ಪುತ್ರ ಬುಡೇನ್ ಸಾಬ್, ಫಾಮಿದಾ ಮುಂತಾದವರು ದೇವಸ್ಥಾನಕ್ಕೆ ಭೇಟಿ ನೀಡಿ, ಪದ್ಧತಿ ಪ್ರಕಾರ ಪೂಜೆ ಸಲ್ಲಿಸಿದ್ದಾರೆ ಎಂದು ಭಗವತಿ ದೇವಸ್ಥಾನ ಸಮಿತಿಯ ಎಂ.ಎಸ್.ರಮೇಶ್ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

13/10/2021 05:44 pm

Cinque Terre

38.82 K

Cinque Terre

7