ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈಯಕ್ತಿಕ ಸ್ವಾರ್ಥಕ್ಕಾಗಿ ಮತಾಂತರ ಬೇಡ : ಮೋಹನ್ ಭಾಗವತ್

ನವದೆಹಲಿ: ಇಗಾಗಲೇ ಮತಾಂತರದ ಸುದ್ದಿ ಕುರಿತಾಗಿ ಎಲ್ಲ ಪಕ್ಷದ ನಾಯಕರು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮದುವೆಯಾಗಲೆಂದೇ ಮತಾಂತರಗೊಳ್ಳುವುದು ತಪ್ಪು ಎಂದಿದ್ದಾರೆ.

ಹುಡುಗ, ಹುಡುಗಿಯರು ಮದುವೆಯಾಗಲೆಂದೇ ಇತರ ಧರ್ಮಗಳಿಗೆ ಮತಾಂತರಗೊಳ್ಳುವುದು ತಪ್ಪಾಗಿದೆ. ಹಿಂದೂ ಧರ್ಮದ ಪರಂಪರೆ ಮತ್ತು ಉದಾತ್ತತೆಯನ್ನು ಬಾಲ್ಯದಿಂದಲೇ ತಾಯಂದಿರು ಮಕ್ಕಳಿಗೆ ಕಲಿಸುತ್ತಿಲ್ಲ. ಹೀಗಾಗಿ ಮತಾಂತರ ನಡೆಯುತ್ತಿದೆ ಎಂದು ಮತಾಂತರ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಹುಡುಗಿಯರು ಮತ್ತು ಹುಡುಗರು ಇತರ ಧರ್ಮವನ್ನು ಏಕೆ ಸ್ವೀಕರಿಸುತ್ತಾರೆ? ಮದುವೆಯೆಂಬ ಅವರ ವೈಯಕ್ತಿಕ ಸ್ವಾರ್ಥಕ್ಕಾಗಿ ಆಗಿದೆ. ನಾವು ಮಕ್ಕಳಿಗೆ ಮನೆಯಲ್ಲಿ ನಮ್ಮ ಧರ್ಮದ ಮೌಲ್ಯಗಳನ್ನು ಕಲಿಸಬೇಕು. ನಮ್ಮ ಸ್ವಭಾವ, ನಮ್ಮ ಧರ್ಮ ಮತ್ತು ನಮ್ಮ ಪ್ರಾರ್ಥನೆ, ಸಂಪ್ರದಾಯಗಗಳ ಕುರಿತಾಗಿ ಗೌರವವನ್ನು ಬೆಳೆಸಬೇಕಿದೆ.

ಹಿಂದು ಸಮಾಜವನ್ನು ಸಂಘಟಿಸುವುದು ಆರ್ ಎಸ್ ಎಸ್ ಗುರಿಯಾಗಿದೆ ಎಂದಿದ್ದಾರೆ. ಅಸ್ಪೃಶ್ಯತೆಯಂತಹ ನೀಚ ಪದ್ಧತಿ ತೊಲಗಬೇಕು ಎಂದು ಆಗ್ರಹಿಸಿದ್ದಾರೆ.

Edited By : Nirmala Aralikatti
PublicNext

PublicNext

11/10/2021 04:11 pm

Cinque Terre

42.28 K

Cinque Terre

21