ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀರಂಗಪಟ್ಟಣ ದಸರಾ ಸಂಭ್ರಮದಲ್ಲಿ ಬೆದರಿದ ಆನೆ: ಮಾವುತರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಮಂಡ್ಯ: ಶ್ರೀರಂಗಪಟ್ಟಣ ದಸರಾ ಆಚರಣೆ ವೇಳೆ ಪಟಾಕಿ, ತಮಟೆ ಶಬ್ದಕ್ಕೆ ಅಂಬಾರಿ ಹೊತ್ತಿದ್ದ ಗೋಪಾಲಸ್ವಾಮಿ ಆನೆ ಬೆದರಿದ್ದು, ಮಾವುತರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.

ನಾಡದೇವಿಗೆ ಪುಷ್ಪಾರ್ಚನೆ ಬಳಿಕ ಆನೆ ಬೆದರಿದ್ದು ಶ್ರೀರಂಗಪಟ್ಟಣದ ಬನ್ನಿಮಂಟಪ ಬಳಿ ಘಟನೆ ನಡೆದಿದೆ. ಆನೆ ಬೆದರುತ್ತಿದ್ದಂತೆ ಜನರು ಚೆಲ್ಲಾಪಿಲ್ಲಿಯಾದರು. ತಕ್ಷಣವೇ ಆನೆ ವೈದ್ಯರು ಮತ್ತು ಮಾವುತರು ಆನೆಗಳನ್ನು ನಿಯಂತ್ರಣಕ್ಕೆ ತಂದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಈ ವೇಳೆ ವಾದ್ಯ, ಧ್ವನಿವರ್ಧಕ ಬಂದ್ ಮಾಡಿದ ಬಳಿಕ ಆನೆ ಸಮಾಧಾನಗೊಂಡಿತು.

ಆನೆ ಬೆದರಿದ ಹಿನ್ನೆಲೆ ಜಂಬೂ ಸವಾರಿಯನ್ನು ಸ್ಥಗಿತಗೊಳಿಸಲಾಗಿದ್ದು ಆನೆ ಮೇಲಿದ್ದ ಮರದ ಅಂಬಾರಿಯನ್ನ ಸಿಬ್ಬಂದಿ ಕಳಚಿಟ್ಟಿದ್ದಾರೆಂಬ ಮಾಹಿತಿ ಇದೆ. ಸದ್ಯ ಗೋಪಲಸ್ವಾಮಿ ಆನೆಯ ಕಾಲಿಗೆ ಸರಪಳಿ ಹಾಕಲಾಗಿದೆ.

Edited By : Vijay Kumar
PublicNext

PublicNext

09/10/2021 05:20 pm

Cinque Terre

78.79 K

Cinque Terre

2