ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯ ದರ್ಬಾರ್ ಹಾಲ್‌ನಲ್ಲಿ ದಸರಾ ಆಚರಣೆ ಹಿನ್ನೆಲೆ ಚಿನ್ನದ ಸಿಂಹಾಸನದ ಜೋಡಣೆ ಕಾರ್ಯ ಆರಂಭವಾಗಿದೆ. ಪೋಲಿಸ್ ಬಿಗಿ ಭದ್ರತೆಯಲ್ಲಿ ಖಜಾನೆಯಿಂದ ಸಿಂಹಾಸನದ ಬಿಡಿ ಭಾಗಗಳನ್ನು ಹೊರತೆಗೆಯಲಾಗಿದೆ. ಇಂದು ಬೆಳಿಗ್ಗೆಯ ಶುಭ ಅಭಿಜಿತ್ ಲಗ್ನದಲ್ಲಿ ಸಿಂಹಾಸನದ ಜೋಡಣೆ ಮೈಸೂರು ಗೆಜ್ಜಗಳ್ಳಿ ಗ್ರಾಮದ ನುರಿತ ವ್ಯಕ್ತಿಗಳಿಂದ ಜೋಡಣೆ ಕಾರ್ಯ ನಡೆಯುತ್ತಿದೆ.
ತರುವಾಯ ಮರದ ಕಾಲಾವಧಿ ಕಟ್ಟಿ ಅದರ ಆಧಾರದ ಮೇಲೆ ಸ್ವತಃ ಪ್ರಮೋದಾ ದೇವಿ ಒಡೆಯರ್ ಸಮಕ್ಷಮದಲ್ಲಿ ಸಿಂಹಾಸನ ಜೋಡಣಾ ಕಾರ್ಯ ನಡೆಯುತ್ತದೆ. ಈ ಹಿನ್ನೆಲೆ ಇಂದು ಮುಂಜಾನೆಯಿಂದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೋಮ ಹವನ ಆರಂಭಿಸಿದ್ದಾರೆ. ಸಿಂಹಾಸನ ಜೋಡಣೆ ಹಿನ್ನೆಲೆ ಇಂದು ಮಧ್ಯಾಹ್ನದ ತನಕ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.
PublicNext
01/10/2021 12:00 pm