ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರೇಂದ್ರ ಗಿರಿ ಅವರ ಉತ್ತರಾಧಿಕಾರಿಯಾಗಿ ಬಲ್ಬಿರ್ ಗಿರಿ ನೇಮಕ

ಲಖನೌ: ಶ್ರೀ ಪಂಚಾಯತಿ ಅಖಾಡ ನಿರಂಜನಿ ಮಹಾಂತ ನರೇಂದ್ರ ಗಿರಿ ಅವರ ಉತ್ತರಾಧಿಕಾರಿಯನ್ನಾಗಿ ಬಲ್ಬಿರ್ ಗಿರಿ ಅವರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಬಾಘಂಬರಿ ಗದ್ದಿಗೆ ಬಲ್ಬಿರ್ ಗಿರಿ ಅವರು ಉತ್ತರಾಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ.

ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ)ಯ ಅಧ್ಯಕ್ಷರೂ ಆಗಿದ್ದ ನರೇಂದ್ರ ಗಿರಿ ಅವರು ಸೆ.20 ರಂದು ತಮ್ಮ ಮಠದ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತ ದೇಹದ ಬಳಿ ಇದ್ದ ಪತ್ರದಲ್ಲಿ ತಮ್ಮ ಉತ್ತರಾಧಿಕಾರಿಯನ್ನಾಗಿ ಬಲ್ಬಿರ್ ಗಿರಿ ಅವರನ್ನು ನೇಮಕ ಮಾಡಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದರು. ಮೃತ ನರೇಂದ್ರ ಗಿರಿ ಅವರ 16 ನೇ ದಿನದ ಕ್ರಿಯೆಗಳ ದಿನದಂದು ಅ.5 ರಂದು ಬಲ್ಬಿರ್ ಗಿರಿ ಅವರ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ ಎಂದು ನಿರಂಜನಿ ಅಖಾಡ ತಿಳಿಸಿದೆ.

Edited By : Nagaraj Tulugeri
PublicNext

PublicNext

29/09/2021 07:36 am

Cinque Terre

24.8 K

Cinque Terre

0