ತುಮಕೂರು: ಕುಪ್ಪೂರು ಗದಿಗೆ ಮಠದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಲಾಗಿದ್ದು, ಶ್ರೀಗಳ ಪೂರ್ವಾಶ್ರಮದ ಸಹೋದರರ ಮಗ 15 ವರ್ಷದ ತೇಜಸ್ ರನ್ನು ಉತ್ತರಾಧಿಕಾರಿಯನ್ನಾಗಿ ಘೋಷಣೆ ಮಾಡಲಾಗಿದೆ.
ವಿವಿಧ ಮಠಾಧಿಶರ ಸಮ್ಮುಖದಲ್ಲಿ ಕುಪ್ಪೂರು ಗದ್ದುಗೆ ಮಠದ ಮುಂದಿನ ಉತ್ತರಾಧಿಕಾರಿ ಆಯ್ಕೆ ಮಾಡಲಾಗಿದ್ದು, ಎಡೆಯೂರು ಶ್ರೀ ರೇಣುಕಾ ಶಿವಚಾರ್ಯ ಶ್ರೀಗಳು ಉತ್ತರಾಧಿಕಾರಿಯನ್ನ ಘೋಷಣೆ ಮಾಡಿದ್ದಾರೆ.
ಶ್ರೀಗಳ ಪೂರ್ವಾಶ್ರಮದ ಸಹೋದರ ಮಹೇಶ್ ಅವರ ಮಗನಾಗಿರುವ ತೇಜಸ್ ಸದ್ಯ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹೆಚ್ಚಿನ ಅಧ್ಯಯನಕ್ಕೆ ಸುತ್ತೂರುಗೆ ಕಳಿಸಲು ಕುಟುಂಬ ಹಾಗೂ ಸ್ವಾಮೀಜಿಗಳು ನಿರ್ಧಾರ ಮಾಡಿದ್ದಾರೆ. ಕುಪ್ಪೂರು ಗದ್ದುಗೆ ಮಠಕ್ಕೆ ವಂಶಪಾರಂಪರ್ಯವಾಗಿ ಉತ್ತಾರಿಧಿಕಾರಿಗಳ ನೇಮಕ ಹಿನ್ನೆಲೆಯಲ್ಲಿ ಯತೀಶ್ವರ ಶಿವಚಾರ್ಯ ಸ್ವಾಮಿಜಿಗಳ ವಂಶದ ತೇಜಸ್‌ರನ್ನೇ ಉತ್ತಾರಿಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎನ್ನಲಾಗಿದೆ.
ಈ ನೇಮಕದ ಬೆನ್ನಲ್ಲೇ ತೇಜಸ್ ಪೋಷಕರು ಮಗನನ್ನು ತಬ್ಬಿ ಕಣ್ಣೀರು ಹಾಕಿದ್ದಾರೆ. ತಾಯಿ ಕಾಂತಾಮಣಿ, ತಂದೆ ಮಹೇಶ್ ಮತ್ತು ಕುಟುಂಬಸ್ಥರು ಯತೀಶ್ವರ ಶಿವಾಚಾರ್ಯಶ್ರೀಯವರನ್ನು ನೆನೆದು ಕಣ್ಣೀರು ಸುರಿಸುತ್ತಿದ್ದಾರೆ.
PublicNext
26/09/2021 03:51 pm