ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ದೇವತ್ಕಲ್‌ನಲ್ಲಿ ಮಾದರಿ ಗಣೇಶ ಚತುರ್ಥಿ ಆಚರಣೆ.!

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ದೇವತ್ಕಲ್ ಗ್ರಾಮದಲ್ಲಿ ಸರಳ ಗಣೇಶ ಚತುರ್ಥಿ ಆಚರಣೆ ಮಾಡಲಾಯಿತು.

ಹೌದು. ಕೋವಿಡ್ ನಿಯಮದ ಪ್ರಕಾರ ಸರ್ಕಾರದ ಮಾರ್ಗಸೂಚಿಗಳಂತೆ ಈ ಗ್ರಾಮದಲ್ಲಿ ಆಂಜನೇಯ, ಗಜಾನನ ಸಂಘ ಹಾಗೂ ಯುವಕರ ತಂಡ ಮಾದರಿ ಗಣೇಶೋತ್ಸವ ಆಚರಿಸಿದ್ದಾರೆ.

ಇನ್ನು ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ನಿತ್ಯ ವಿವಿಧ ಪೂಜಾ ಕೈಂಕರ್ಯಗಳು ಮಾಡುತ್ತ ವಿಘ್ನ ನಿವಾರಕನ ದರ್ಶನಕ್ಕೆ ಬರುವ ಭಕ್ತರಿಗೆ ಕೋವಿಡ್ ಕುರಿತು ಜಾಗೃತಿ ಮೂಡಿಸುತ್ತ, ಬರುವ ಭಕ್ತರಿಗೆ ಉಚಿತ ಮಾಸ್ಕ್ ವಿತರಿಸುವ ಮೂಲಕ ಸಮಾಜಮುಖಿ ಗಣೇಶ ಹಬ್ಬ ಮಾಡಿದ್ದಾರೆ.

ಇಂದು ಗಣೇಶ ಚತುರ್ಥಿ ಪ್ರಯುಕ್ತ ಯುವಕರ ತಂಡ ಗ್ರಾಮದ ಜನತೆಗೆ ಭೋಜನದ ವ್ಯವಸ್ಥೆ ಮಾಡಿದ್ದು, ಗಣೇಶನಿಗೆ ಪ್ರೀಯವಾದ ಕಡುಬು, ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಮೊಸರು, ಸೆಂಗಿನ ಚಟ್ನಿ, ಬದನೆಕಾಯಿ ಚಟ್ನಿ, ಅನ್ನ, ಸಾಂಬರ್ ಸೇರಿದಂತೆ ವಿವಿಧ ರೀತಿ ಆಹಾರ ತಯಾರಿಸಿದ್ದು, ಬಂದ ಭಕ್ತರು ವಿನಾಯಕನ ದರ್ಶನ ಪಡೆದು ಭರ್ಜರಿ ಭೋಜನ ಸವಿದರು.

ಇದೇ ವೇಳೆ ಗಣೇಶ ಚತುರ್ಥಿ ಅಂಗವಾಗಿ ಗ್ರಾಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಮತ್ತು ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದಲ್ದೇ ಈ ಯುವಕರ ಮಾದರಿ ಗಣೇಶ ಚತುರ್ಥಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By : Vijay Kumar
PublicNext

PublicNext

17/09/2021 05:41 pm

Cinque Terre

24.59 K

Cinque Terre

1

ಸಂಬಂಧಿತ ಸುದ್ದಿ