ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು ದೇವಸ್ಥಾನ ನೆಲಸಮ: 'ಕೈ' ಆಕ್ರೋಶ, ತುರ್ತುಸಭೆ ಕರೆದ ಆರ್‌ಎಸ್‌ಎಸ್‌

ಬೆಂಗಳೂರು: ನಂಜನಗೂಡಿನಲ್ಲಿ ಹಿಂದೂ ದೇವಸ್ಥಾನವನ್ನು ನೆಲಸಮ ಮಾಡಿದ್ದಕ್ಕೆ ಕಾಂಗ್ರೆಸ್‌ ಕಿಡಿಕಾರಿದೆ. ಇತ್ತ ಹಿಂದೂ ದೇವಾಲಯಗಳ ತೆರವಿಗೆ ಆದೇಶ ಹಿನ್ನೆಲೆ ಇಂದು ಸಂಜೆ ಆರ್‌ಎಸ್‌ಎಸ್ ತುರ್ತು ಸಭೆ ಕರೆದಿದೆ.

ದೇವಸ್ಥಾನ ನೆಲಸಮದ ವಿಚಾರವಾಗಿ ಟ್ವೀಟ್ ಮಾಡಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, "ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರ ಪುರಾತನ ಹಿಂದೂ ದೇವಾಲಯವನ್ನು ಕೆಡವಿದೆ. ಇದಕ್ಕಾಗಿ ನಾವು ಪ್ರಧಾನಿ ಮೋದಿಗೆ ಧನ್ಯವಾದ ಹೇಳಬೇಕೇ" ಎಂದು ಪ್ರಶ್ನಿಸಿದ್ದಾರೆ.

ಆರ್‌ಎಸ್‌ಎಸ್‌ ಸಭೆಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರಂತೆ. ದೇವಾಲಯ ತೆರವಿಗೆ ಕಾರಣರಾದ ಅಧಿಕಾರಿಗಳ ತಲೆದಂಡ, ಸ್ಥಳೀಯ ಬಿಜೆಪಿ ಶಾಸಕರು, ಸಂಸದರ ನಿರ್ಲಕ್ಷ ಕುರಿತಂತೆ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಮೈಸೂರಿನ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಈ ಕ್ಲೋಸ್ ಡೋರ್ ಮೀಟಿಂಗ್​ಗೆ ಮೈಸೂರು ವಿಭಾಗದ ಎಲ್ಲಾ ಸಂಘ ಪರಿವಾರದ ನಾಯಕರಿಗೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.

Edited By : Vijay Kumar
PublicNext

PublicNext

11/09/2021 03:23 pm

Cinque Terre

53.51 K

Cinque Terre

6