ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷ್ಣ ಜನ್ಮಾಷ್ಟಮಿಯಂದು ಇಸ್ಕಾನ್ ದೇವಾಲಯ ಪ್ರವೇಶ ಇಲ್ಲ

ಬೆಂಗಳೂರು: ಕೋವಿಡ್ ನಿಯಮಗಳ ಪಾಲಿಸಬೇಕಾದ್ದರಿಂದ ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಈ ಬಾರಿ ಕೃಷ್ಣ ಜನ್ಮಾಷ್ಟಮಿಯಂದು ಪ್ರವೇಶ ನಿರಾಕರಿಸಲಾಗಿದೆ. ಈ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿ ಈಗಾಗಲೇ ಪ್ರಕಟಣೆ ಹೊರಡಿಸಿದೆ.

ಇಸ್ಕಾನ್ ದೇವಾಸ್ಥಾನವು ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಬಹಳ ಜನ ಭಕ್ತರನ್ನು ಆಕರ್ಷಿಸುತ್ತದೆ. ಈ ವರ್ಷ ಇಸ್ಕಾನ್ ಬೆಂಗಳೂರು ದೇವಸ್ಥಾನವು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 29 ಮತ್ತು 30, 2021 ರಂದು ಆಚರಿಸುತ್ತಿದೆ. ಸಾರ್ವಜನಿಕರ ಸುರಕ್ಷತೆಯನ್ನು ಮತ್ತು ಸರ್ಕಾರಿ ನಿಯಮಗಳನ್ನು ಪರಿಗಣಿಸಿ ಮತ್ತು ಜವಾಬ್ದಾರಿಯುತ ಸಂಸ್ಥೆಯಾಗಿ, ಇಸ್ಕಾನ್ ಆಡಳಿತ ಮಂದಿರವನ್ನು ಈ ಎರಡೂ ದಿನ ಸಾರ್ವಜನಿಕರಿಗಾಗಿ ಮುಚ್ಚಿರುತ್ತದೆ ಎಂದು ನಿರ್ಧರಿಸಿದೆ.

Edited By : Nagaraj Tulugeri
PublicNext

PublicNext

27/08/2021 05:15 pm

Cinque Terre

108.14 K

Cinque Terre

1