ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಮಂಗಿಹಾಳದಲ್ಲಿ ಮೊಹರಂ ಹಬ್ಬ ಆಚರಣೆ, ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಜನರು.!

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮಂಗಿಹಾಳ ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆ ಮಾಡಲಾಯಿತು.

ಬುಧವಾರ ಬೆಳಗಿನ ಜಾವ 4 ಗಂಟೆಗೆ ದೇವರ ಸವಾರಿ ನಡೆಯಿತು. ಇಂದು ದಫನ್ ಕೊನೆಯದಿನದಂದು ಇಡೀ ಗ್ರಾಮದ ಜನರು ಸೇರಿಕೊಂಡು ಅಲಿಗೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಇನ್ನು ಮಸ್ಜಿದ್ ನಲ್ಲಿ ಐದು ದೇವರು ಕುಳಿತಿದ್ದು, ಇಂದು ಗ್ರಾಮದ ಅಲಾಯ ಪೀರ ಪೂಜಾರಿಗಳಾದ ಕಾಸಿಂಸಾಬ್, ಅಯ್ಯಪ್ಪ ಪೂಜಾರಿ, ದೇವಣ್ಣಗೌಡ ಹಾಗೂ ಬಸಣ್ಣ ಅಮ್ಮಾಪುರ ಇವರು ದೇವರು ಹಿಡಿದಿದ್ದರು.

ಕೊನೆಯ ದಫನ್ ಸಂಭ್ರಮವನ್ನು ಮಹಿಳೆಯರು ಹಾಗೂ ಮಕ್ಕಳು ಕಣ್ತುಂಬಿಕೊಂಡರು. ಜೊತೆಗೆ ದೇವರ ದೇವರ ದರ್ಶನ ಪಡೆದು ಪುನೀತರಾದರು.

ಅಲ್ಲದೇ ಕೆಲ ಯುವಕರು ತಮಟೆ ಸದ್ದಿಗೆ ಸಖತ್ ಸ್ಟೆಪ್ ಹಾಕಿ ಖುಷಿಪಟ್ಟರು.

-----

ಮೌನೇಶ ಬಿ. ಮಂಗಿಹಾಳ,

ಪಬ್ಲಿಕ್ ನೆಕ್ಸ್ಟ್ ಯಾದಗಿರಿ.

Edited By : Manjunath H D
PublicNext

PublicNext

19/08/2021 06:09 pm

Cinque Terre

41.12 K

Cinque Terre

2