ಚೆನ್ನೈ: ದೇಶದಿಂದ ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ನಾನೇ ಹೊಸ ಮಧುರೈ ಅಧೀನಂ (ಪೀಠಾಧೀಶ) ಎಂದು ಘೋಷಿಸಿಕೊಂಡಿದ್ದಾರೆ.
ಮಧುರೈ ಅಧೀನಂ 292ನೇ ಧರ್ಮಗುರು ಶ್ರೀ ಅರುಣಗಿರಿನಾಥರ್(77) ಮಧುರೈನ ಅಪೋಲೋ ಆಸ್ಪತ್ರೆಯಲ್ಲಿ ಕಳೆದ ಶುಕ್ರವಾರ ನಿಧನರಾಗಿದ್ದರು. ಹೀಗಾಗಿ ನಿತ್ಯಾನಂದ, ತಮ್ಮ ಸ್ವಯಂ ಘೋಷಿತ ನೇಮಕಾತಿಯಲ್ಲಿ ಅವರ ಹೊಸ ಅಧೀನಂ ಆಗುವ ಪ್ರಕ್ರಿಯೆ ಈಗ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.
ನಿತ್ಯಾನಂದ ಅವರು ಕಳೆದ ಕೆಲವು ವರ್ಷಗಳಿಂದಲೂ ತಾವೇ ಅಧೀನಂ ಶ್ರೀ ಅರುಣಗಿರಿನಾಥರ ಉತ್ತರಾಧಿಕಾರಿ ಎಂದು ಹೇಳಿಕೊಂಡು ಬಂದಿದ್ದಾರೆ. ಮಧುರೈ ಅಧೀನಂ ಅನ್ನು ಅತ್ಯಂತ ಹಳೆಯ ಶೈವ ಅಧೀನಂಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಮತ್ತು ಇದನ್ನು ಸಹಸ್ರಮಾನಗಳ ಹಿಂದೆ ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತದೆ. ಮೂವರು ನಾಯನ್ಮಾರ್ (ಶಿವನ ಶಿಷ್ಯರು) ಒಬ್ಬರಾದ ತಿರುಜ್ಞಾನ ಸಂಬಂಧರಿಂದ ಪುನಶ್ಚೇತನಗೊಂಡಿದೆ ಎಂದು ಹೇಳಲಾಗುತ್ತದೆ.
PublicNext
18/08/2021 07:47 pm