ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಜ್ಜಯಿನಿ: 9ನೇ ಶತಮಾನದ ಶಿವಲಿಂಗ, ವಿಷ್ಣುವಿನ ವಿಗ್ರಹ ಪತ್ತೆ

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲ್ ಮಂದಿರದ ಉತ್ಖನನದ ವೇಳೆ 9ನೇ ಶತಮಾನದ ಶಿವಲಿಂಗವೊಂದು ಪತ್ತೆಯಾಗಿದೆ. ಜೊತೆಗೆ ಸಣ್ಣದೊಂದು ವಿಷ್ಣುವಿನ ವಿಗ್ರಹ ಕೂಡ ಪತ್ತೆಯಾಗಿದ್ದು, ವಿಷ್ಣು ಚತುರ್ಭುಜ ಸ್ಥಾನಕ ಆಸನದಲ್ಲಿದ್ದಾನೆ ಎಂದು ಹೇಳಲಾಗಿದೆ. ಈ ವಿಗ್ರಹ ಸುಮಾರು 10ನೇ ಶತಮಾನದ್ದಿರಬಹುದು ಎಂದು ಗುರುತಿಸಲಾಗಿದೆ.

ಪುರಾತತ್ವ ಶಾಸ್ತ್ರ ಅಧಿಕಾರಿ ಧ್ರುವೇಂದ್ರ ಜೋಧಾ ಅವರು ಸ್ಥಳಕ್ಕೆ ಆಗಮಿಸಿ ದೇವಸ್ಥಾನದೊಳಗಿರುವ ಶಿವಲಿಂಗದಷ್ಟು ಎತ್ತರ ಅಂದ್ರೆ 5 ಅಡಿ ಎತ್ತರದ ಶಿವಲಿಂಗ ಇದಾಗಿದೆ ಎಂದಿದ್ದಾರೆ. ಈ ಶಿವಲಿಂಗವನ್ನು ಜಲಧಾರಿ ಎಂದು ಗುರುತಿಸಲಾಗಿದ್ದು, ಅದರ ಅಡಿಯಲ್ಲಿ ಇದ್ದ ಇಟ್ಟಿಗೆಗಳು ದೊರಕಿವೆ. ಈ ಇಟ್ಟಿಗೆಗಳು 5ನೇ ಶತಮಾನದವು ಎನ್ನಲಾಗಿದೆ.

Edited By : Vijay Kumar
PublicNext

PublicNext

13/08/2021 10:54 am

Cinque Terre

58.81 K

Cinque Terre

9