ರಾಮನಗರ: ಜಮೀನಿನಲ್ಲಿ ಜೆಸಿಬಿ ಯಂತ್ರದ ಮೂಲಕ ಕಾಲುವೆ ಕೆಲಸ ಮಾಡುವ ವೇಳೆ ಚಾಲಕನಿಗೆ ಹಾಗೂ ಸ್ಥಳೀಯ ಜನರಿಗೆ ವಿಸ್ಮಯಕಾರಿಯ ಗುಹೆ ಪತ್ತೆಯಾಗಿ ಜನರಲ್ಲಿ ಅಚ್ಚರಿಗೆ ಕಾರಣವಾಗಿದೆ.
ಮಾಗಡಿ ತಾಲ್ಲೂಕಿನ ಕಣ್ಣೂರು ಗ್ರಾಮದ ಮಕ್ಕಳ ದೇವರ ಮಠದ ಹೊಲದಲ್ಲಿ ಮಣ್ಣಿನ ಗುಹೆ ಪತ್ತೆಯಾಗಿದೆ. ತಾಮ್ರ, ಹಿತ್ತಾಳೆ ಮತ್ತು ಕಂಚುಮುಟ್ಟಿನ ಪೂಜಾ ಸಾಮಾಗ್ರಿಗಳೂ ದೊರೆತಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಠಾಧೀಶ ಮೃತ್ಯುಂಜಯ ಸ್ವಾಮಿಜಿ, 'ತೆಂಗಿನ ಸಸಿಗೆ ಡ್ರಿಪ್ಸ್ ಹಾಕಿಸಲು ಶನಿವಾರ ಬೆಳಿಗ್ಗೆ 9 ಗಂಟೆಯಲ್ಲಿ ಗುಂಡಿ ತೆಗೆಯಲಾಗುತ್ತಿತ್ತು. ಬಂಡೆಯೊಂದರ ಕೆಳಗೆ ಆರು ಅಡಿಗಳ ಆಳದ ಗುಹೆಯಲ್ಲಿ ಹಿತ್ತಾಳೆ ಮತ್ತು ಕಂಚುಮುಟ್ಟಿನ ಮಣ್ಣಿನಿಂದ ತುಕ್ಕು ಹಿಡಿದಿರುವ ತಟ್ಟೆ, ದೀಪಸ್ತಂಭ, ವಿಭೂತಿ ಗಟ್ಟಿ, ಉಯ್ಯಾಲೆ ಕಂಬ, ಜಾಗಟೆ ಇತರೆ ಒಟ್ಟು 100 ಕೆ.ಜಿ.ತೂಕದ ಹಿತ್ತಾಳೆ ಕಂಚುಮುಟ್ಟಿನ ಸಾಮಗ್ರಿಗಳು ಪತ್ತೆಯಾಗಿವೆ’ ಎಂದು ತಿಳಿಸಿದ್ದಾರೆ.
ಶ್ರೀಮಠದ ಸ್ವಾಮೀಜಿಯೊಬ್ಬರು ಲೋಕಕಲ್ಯಾಣಕ್ಕಾಗಿ ತಪಗೈದು, ಜೀವಂತ ಸಮಾಧಿ ಹೊಂದಿರಬಹುದು ಎಂಬ ಮಾಹಿತಿ ಇದ್ದು, ಸುತ್ತಲಿನ ಗ್ರಾಮದ ಭಕ್ತರಲ್ಲಿ ಕುತೂಹಲ ಉಂಟಾಗಿದೆ. ತಂಡೋಪ ತಂಡವಾಗಿ ಮಠಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.
PublicNext
08/08/2021 05:36 pm