ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಬ್ಬಾ ಕಡಲ್ ಪ್ರದೇಶದ ಶಿಥಲ್ ನಾಥ್ ದೇವಾಲಯವನ್ನು 31 ವರ್ಷಗಳ ನಂತರ ತೆರೆಯಲಾಗಿದೆ.
ಉಗ್ರವಾದದಿಂದಾಗಿ ಶೀತಲ್ ನಾಥ್ ದೇವಾಲಯವನ್ನು ಮುಚ್ಚಲಾಗಿತ್ತು. ಮಂಗಳವಾರ ಬಸಂತ ಪಂಚಮಿಯ ಶುಭ ಸಂದರ್ಭದಲ್ಲಿ ಶೀತಲ್ ನಾಥ್ ದೇವಾಲಯವನ್ನು ತೆರೆಯಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದೇವಾಲಯವನ್ನು ಮುಚ್ಚಿದ ಬಳಿಕ ಇಲ್ಲಿನ ನೆಲೆಸಿದ್ದ ಹಿಂದೂ ಸಮುದಾಯದವರು ವಲಸೆ ಹೋಗಿದ್ದಾರೆ. ದೇವಾಲಯವನ್ನು ಮತ್ತೆ ತೆರೆಯಲು ಸ್ಥಳೀಯ ಮುಸ್ಲಿಂ ಸಮುದಾಯದವರಿಂದ ಬೆಂಬಲ, ಅಗತ್ಯ ಸಹಕಾರ ದೊರೆತಿದೆ. ಇನ್ನು ಮುಂದೆ ನಿತ್ಯ ಪೂಜೆ ಜರುಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾದ ಸಂತೋಷ್ ರಾಜಧನ್ ತಿಳಿಸಿದ್ದಾರೆ.
PublicNext
17/02/2021 11:43 am