ತುಮಕೂರು: ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವಂತೆ ಆಗ್ರಹಿಸಿ ಕೂಡಲಸಂಗಮ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮದಿಂದ ಪಾದಯಾತ್ರೆ ಶುರುವಾಗಿದ್ದು ಮಾಡಿದ್ದು ಪಾದಯಾತ್ರೆ ತಾವರೆಕೆರೆಯಿಂದ ಶಿರಾ ಕಡೆಗೆ ಹೊರಟಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ತಾವು ಪಾದಯಾತ್ರೆ ಶುರು ಮಾಡಿದಾಗ ಬೆಂಗಳೂರಿಗೆ ಹೋಗಿ ಪ್ರಮಾಣಪತ್ರ ಹಿಡಿದುಕೊಂಡು ಬರುವುದಾಗಿ ಜನತೆಗೆ ಮಾತು ಕೊಟ್ಟಿದ್ದೆವು. ಹೀಗಾಗಿ ಮುಖ್ಯಮಂತ್ರಿಗಳು ಗಟ್ಟಿ ಮನಸ್ಸು ಮಾಡಿ ಆದಷ್ಟು ಬೇಗ ವರದಿ ಪಡೆಯಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಪಂಚಮಸಾಲಿಗಳನ್ನು ಶಾಶ್ವತ ಹಿಂದುಳಿದ ವರ್ಗಕ್ಕೆ ಸೇರಿಸಲು ವರದಿಗೆ ಆದೇಶಿಸಿದ್ದಾರೆ.ಆದರೆ, ಭಾನುವಾರ ತಾವು ಕಾನೂನು ತಜ್ಞರ ಜೊತೆ ಸಮಾಲೋಚಿಸಿದ್ದು ವರದಿ ಬರುವುದು ವಿಳಂಬವಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಬಹಳಷ್ಟು ಬೇಸರವಾಗುತ್ತಿದೆ ಎಂದಿದ್ದಾರೆ.
ಈ ನಡುವೆ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಕೂಡಲ ಸಂಗಮದಿಂದ ಹಮ್ಮಿಕೊಂಡಿರುವ ಪಾದಯಾತ್ರೆ ಭಾನುವಾರ ಶಿರಾ ನಗರದ ಬಯಲು ಆಂಜನೇಯಸ್ವಾಮಿ ದೇವಸ್ಥಾನದ ಆವರಣಕ್ಕೆ ತಲುಪಿತು. ವಚನಾನಂದ ಸ್ವಾಮೀಜಿ, ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಇದ್ದರು.
PublicNext
08/02/2021 07:40 pm