ಮಹಾರಾಷ್ಟ್ರ: ಶ್ರೀ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾದ ಪೇಜಾವರ ಶ್ರೀಗಳು ಮಹಾರಾಷ್ಟ್ರದಲ್ಲಿ ನಿಧಿ ಸಂಗ್ರಹ ಅಭಿಯಾನ ಕೈಗೊಂಡಿದ್ದಾರೆ.
ಇಂದು ಮಹಾರಾಷ್ಟ್ರದ ಪ್ರಥಮ ಪ್ರಜೆ, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾಗಿ ಮಂದಿರ ನಿರ್ಮಾಣದ ಈ ತನಕದ ಪ್ರಕ್ರಿಯೆಯ ಬಗ್ಗೆ ಸಮಾಲೋಚನೆ ನಡೆಸಿದರು.
ಮಹಾರಾಷ್ಟ್ರದ ಸಮಸ್ತ ಜನತೆಯ ಸರ್ವ ಸಹಕಾರಕ್ಕಾಗಿ ಅಪೇಕ್ಷಿಸಿ ಪತ್ರ ಅರ್ಪಣೆ ಮಾಡಿದ ಶ್ರೀಗಳಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಭಕ್ತಿ ಗೌರವ ಅರ್ಪಿಸಿದರು. ಶ್ರೀಗಳಿಂದಲೂ ರಾಜ್ಯಪಾಲರಿಗೆ ಅನುಗ್ರಹ ಪ್ರಸಾದ ನೀಡಲಾಯಿತು.
ವಿಶ್ವ ಹಿಂದು ಪರಿಷತ್ ನೇತೃತ್ವದ ಬಸ್ತಿ ( ಬಡಾವಣೆಯ ಮನೆ ಮನೆ ) ಭೇಟಿಯಲ್ಲಿ ಭಾಗಿಯಾದ ಶ್ರೀಗಳು ರಾಮನಿಗಾಗಿ ಜೋಳಿಗೆ ಹಿಡಿದ
ಸಾವಿರಾರು ಕಾರ್ಯಕರ್ತರಿಗೆ ಉತ್ಸಾಹ, ಸ್ಫೂರ್ತಿ ತುಂಬಿದರು.
PublicNext
07/02/2021 03:03 pm