ಬೆಳಗಾವಿ: ಶಿವಲಿಂಗ ಮೂರ್ತಿಯ ಕಣ್ಣುಗಳೆರಡು ತೆರೆದಂತೆ ಗೋಚರಿಸುತ್ತಿದ್ದು, ಈ ವಿಸ್ಮಯ ನೋಡಲು ಭಕ್ತಗಣ ದೇವಸ್ಥಾನಕ್ಕೆ ದೌಡಾಯಿಸುತ್ತಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಬಣಗಾರ ಗಲ್ಲಿಯಲ್ಲಿರುವ ಶಂಕರಲಿಂಗ ದೇವಸ್ಥಾನದ ಶಿವಲಿಂಗ ಮೂರ್ತಿ ಈ ವಿಸ್ಮಯಕ್ಕೆ ಸಾಕ್ಷಿಯಾಯಿತು. ಸೋಮವಾರ ಬೆಳಗ್ಗೆ
ದೇವಸ್ಥಾನದ ಅರ್ಚಕರು ದಿನನಿತ್ಯದ ಪೂಜೆಗೆಂದು ಬಂದಾಗ ಆರ್ಚಕರು ಆಶ್ಚರ್ಯಚಕಿತರಾಗಿದ್ದಾರೆ. ಶಿವಲಿಂಗ ಮೂರ್ತಿಯಲ್ಲಿ ಕಣ್ಣುಗಳು ಮೂಡಿವೆ ಎಂದಿದ್ದಾರೆ. ಈ ಪವಾಡ ನೋಡಲು ಶಂಕರಲಿಂಗ ದೇವಸ್ಥಾನಕ್ಕೆ ಭಕ್ತರು ತಂಡೋಪ ತಂಡವಾಗಿ ಬರ್ತಿದ್ದಾರೆ. ಕಳೆದ ಭಾನುವಾರ ಸಂಕಷ್ಟ ಹರ ನಿಮಿತ್ತ ರಾತ್ರಿ ಸಂಕಷ್ಟಿ ಚಂದ್ರೋದಯ ಸಮಯದಲ್ಲಿ ಕಲ್ಲಿನ ಮೂರ್ತಿಯಲ್ಲಿ ಕಣ್ಣು ಮೂಡಿವೆ ಎಂಬುವುದು ಅರ್ಚಕರು ಹಾಗೂ ಭಕ್ತರ ವಾದ. ಇದು ಶುಭಸಂದೇಶವಾಗಿದ್ದು ಜಗತ್ತಿನಲ್ಲಿರುವ ರೋಗರುಜಿನ ಹೋಗುತ್ತವೆ.
ಕಳೆದ ಒಂದು ವರ್ಷದಿಂದ ಮನುಸಂಕುಲವನ್ನೆ ದುಃಖಸಾಗರದಲ್ಲಿ ನೂಕಿದ್ದ ಕೊವಿಡ್ ನಿವಾರಣೆಗಾಗಿ ಶಿವ ಕಣ್ಣು ಬಿಟ್ಟಾದ್ದನೆ ಅಂತ ಭಕ್ತಾದಿಗಳ ಮಾತಾಗಿದೆ. ಈ ಹಿಂದೆ 2004ರಲ್ಲಿಯೂ ಇದೇ ರೀತಿ ಕಣ್ಣುಗಳು ಪ್ರತ್ಯಕ್ಷವಾಗಿದ್ದವು ಎಂದು ಅರ್ಚಕ ಮಾಹಿತಿ ನೀಡಿದ್ದಾರೆ ಆ ವೇಳೆಯಲ್ಲಿ ಡೆಂಗ್ಯು ತಾಂಡವ ವಾಡುತಿತ್ತು ಆ ವೇಳೆಯಲ್ಲಿ ಶಿವ ಈ ರೀತಿ ಕಣ್ಣು ಬಿಟ್ಟು ತನ್ನ ಕೋಪದಿಂದ ಆ ಡೆಂಗ್ಯವನ್ನ ಸಂಹಾರ ಮಾಡಿದ್ದ ಅನ್ನೊದು ಇಲ್ಲಿ ಜನರ ಮಾತು.
ಒಟ್ಟಿನಲ್ಲಿ ವಿಜ್ಞಾನ ತಂತ್ರಜ್ಞಾನ ಇಷ್ಟೊಂದು ಮುಂದುವರಿದರು ಸಹ ನಮ್ಮ ದೇಶದಲ್ಲಿ ಭಕ್ತಿ ಭಾವೈಕ್ಯತೆಗೇನು ಕಡಿಮೆ ಇಲ್ಲ. ಇದರ ಮಧ್ಯೆ ಹೀಗೆ ಶಿವ ಕಣ್ಣು ಬಿಟ್ಟ, ಗಣೇಶ ಹಾಲು ಕುಡಿದ ಎಂಬ ಚಮತ್ಕಾರಗಳ ನಡೆಯುತ್ತಲೆ ಬಂದಿದ್ದ, ಜನ ಮರಳೊ ಜಾತ್ರೆ ಮರಳೊ ಎಂಬತೆ ಈ ಕಳೆದ ಎರಡು ದಿನಗಳಿಂದ ಈ ಘಟನೆ ಟಾಕ್ ಆಫ್ ದಿ ಟೌನ್ ಆಗಿದೆ.
PublicNext
03/02/2021 11:59 am