ಚೆನ್ನೈ: ಶ್ರೀ ರಾಮಮಂದಿರ ನಿರ್ಮಾಣಾರ್ಥ ನಿಧಿ ಸಂಗ್ರಹ ಅಭಿಯಾನದ ಪ್ರಯುಕ್ತ ಚೆನ್ನೈ ವಿಶ್ವ ಹಿಂದೂ ಪರಿಷತ್ ವತಿಯಿಂದ ಚೆನ್ನೈ ನ ತೊರೈಪ್ಪಾಕ್ಕಮ್ ( ಹಳೆ ಮಹಾಬಲಿಪುರಮ್) ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾನುವಾರ ಭಾಗವಹಿಸಿ ಮಾರ್ಗದರ್ಶನ ನೀಡಿದರು.
ಈ ಸಂದರ್ಭ ಅಲ್ಲಿನ ಕಾಲೊನಿಗಳಿಗೂ ಶ್ರೀಪಾದರು ಸಂಚರಿಸಿ ಮನೆ ಮನೆಗಳಿಂದ ನಿಧಿ ಸಂಗ್ರಹಿಸಿದರು.ಆ ಬಳಿಕ ಚೆನ್ನೈ ನ ಚಿನ್ಮಯ ಮಿಶನ್ ನೇತೃತ್ವದ ಚಿನ್ಮಯ ತರಂಗಿಣಿ ಆಶ್ರಮದಲ್ಲಿ ನಡೆದ ನಿಧಿ ಸಂಗ್ರಹ ಅಭಿಯಾನ ಮತ್ತು ಸತ್ಸಂಗದಲ್ಲೂ ಶ್ರೀಗಳು ಭಾಗವಹಿಸಿ ಸಂದೇಶ ನೀಡಿದರು.
PublicNext
31/01/2021 09:53 pm