ಮೈಸೂರು: ಕೊರೊನಾ ಸಂಕಷ್ಟದ ನಡುವೆಯೂ ಭಕ್ತರು ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಒಂದು ತಿಂಗಳಲ್ಲಿ ಒಂದು ಕೋಟಿ ರೂ. ಅಧಿಕ ಕಾಣಿಕೆ ನೀಡಿದ್ದಾರೆ.
ಕಳೆದೊಂದು ತಿಂಗಳಿನಲ್ಲಿ ದೇವಸ್ಥಾನದ ಹುಂಡಿಗಳಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ನಡೆಸಲಾಗಿದೆ. ಒಟ್ಟು 1 ಕೋಟಿ 1 ಲಕ್ಷದ 71 ಸಾವಿರದ 910 ರೂಪಾಯಿ ನಗದು ಸಂಗ್ರಹವಾಗಿದೆ. ಇದರೊಂದಿಗೆ 70 ಗ್ರಾಂ ಚಿನ್ನ ಹಾಗೂ 3.500 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು. 7,500 ರೂಪಾಯಿ ಮೌಲ್ಯದ ನಿಷೇಧಿತ ನೋಟುಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿವೆ. ಅದರಲ್ಲಿ 1000 ಮುಖಬೆಲೆಯ 2 ನೋಟುಗಳು ಹಾಗೂ 500 ಮುಖಬೆಲೆಯ 11 ನಿಷೇಧಿತ ನೋಟುಗಳು ಪತ್ತೆಯಾಗಿವೆ. ಜೊತೆಗೆ 2 ವಿದೇಶಿ ಕರೆನ್ಸಿಗಳು ನಂಜುಂಡೇಶ್ವರ ಸ್ವಾಮಿಯ ಹುಂಡಿಯಲ್ಲಿ ದೊರೆತಿವೆ.
PublicNext
30/01/2021 01:10 pm