ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ಸಂಕಷ್ಟದ ನಡುವೆಯೂ ಕೋಟ್ಯಾಧೀಶನಾದ ಮಲೆ ಮಹದೇಶ್ವರ

ಚಾಮರಾಜನಗರ: ಕೊರೊನಾ ಸಂಕಷ್ಟದ ನಡುವೆಯೂ ಇತಿಹಾಸ ಪ್ರಸಿದ್ಧ ಹನೂರು ತಾಲೂಕಿನ ಮಲೆ ಮಹದೇಶ್ವರನ ಹುಂಡಿಗೆ ಕೋಟಿಗಟ್ಟಲೆ ಹಣ ಹರಿದು ಬಂದಿದೆ.

ಒಂದು ತಿಂಗಳ ಬಳಿಕ ಮಲೆ ಮಾದಪ್ಪ ಸ್ವಾಮಿಯ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿದ್ದು, ಭಕ್ತರಿಂದ ಅಪಾರ ಪ್ರಮಾಣದ ಕಾಣಿಕೆ ಅರ್ಪಣೆಯಾಗಿದೆ. ಹುಂಡಿಯಲ್ಲಿ ಸುಮಾರು 2 ಕೋಟಿ 21 ಲಕ್ಷದ 59 ಸಾವಿರದ 810 ರೂಪಾಯಿ ನಗದು ಸಂಗ್ರಹವಾಗಿದೆ. ಇದರ ಜೊತೆಗೆ ಸುಮಾರು 80 ಗ್ರಾಂ ಚಿನ್ನ, 2 ಕೆ.ಜಿ. ಬೆಳ್ಳಿ ಸಂಗ್ರಹವಾಗಿದೆ. 11.23 ಲಕ್ಷ ರೂ. ನಾಣ್ಯರೂಪದಲ್ಲೇ ಸಂಗ್ರಹವಾಗಿರುವುದು ವಿಶೇಷವಾಗಿದೆ.

Edited By : Vijay Kumar
PublicNext

PublicNext

29/01/2021 12:38 pm

Cinque Terre

72.58 K

Cinque Terre

0