ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಿಂಗಾಯತಕ್ಕೂ ಸನಾತನಕ್ಕೂ ಸಂಬಂಧವಿಲ್ಲ: ಸಿದ್ಧರಾಮ ಸ್ವಾಮೀಜಿ

ಗದಗ: ಮಹಾಮಾನವತಾವಾದಿ ಪ್ರಗತಿಪರ ಚಿಂತಕ, ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ನೂತನ ‘ಅನುಭವ ಮಂಟಪ’ ನಿರ್ಮಿಸಲು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು ಶಿಲಾನ್ಯಾಸ ನೆರವೇರಿಸಿರುವುದು ಸಂತೋಷದ ಸಂಗತಿಯಾಗಿದ್ದರೂ, ಆ ನೆಪದಲ್ಲಿ ಸರಕಾರ ನಮ್ಮ ನಾಡಿನ ಬಹುತೇಕ ದಿನಪತ್ರಿಕೆಗಳಿಗೆ ನೀಡಿದ ಜಾಹಿರಾತಿನಲ್ಲಿ ಗಂಭೀರ ದೋಷವಾಗಿರುವುದು ಆಘಾತಕಾರಿಯಾಗಿದೆ ಎಂದು ಗದಗ-ಡಂಬಳ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಶ್ರೀಗಳು ಕರ್ನಾಟಕ ಸರಕಾರ ದಿನಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ “ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ” ಎಂಬ ಮೊದಲ ವಾಕ್ಯವೇ ಗಂಭೀರ ದೋಷದಿಂದ ಕೂಡಿದೆ. ಸನಾತನಕ್ಕೂ- ಪ್ರಗತಿಪರ ಚಿಂತನೆಗೂ ಎಣ್ಣೆ-ಶೀಗೇಕಾಯಿ ಸಂಬಂಧ. ಅವೆರಡೂ ಒಂದೆಡೆ ಇರಲಾರವು. ಆದರೆ ಸರಕಾರ ಜಾಹಿರಾತಿನ ಮೂಲಕ ಅವೆರಡನ್ನೂ ಒಂದುಗೂಡಿಸುವ ಪವಾಡವನ್ನೇ ಮಾಡಿದೆ.

ಸನಾತನ ಮತ್ತು ಪ್ರಗತಿಪರ ಎಂಬ ಶಬ್ದಗಳನ್ನು ಒಂದುಗೂಡಿಸಬಹುದೆ ಹೊರತು ಸನಾತನ ಮತ್ತು ಪ್ರಗತಿಪರ ವಿಚಾರಧಾರೆಗಳನ್ನು ಒಂದುಗೂಡಿಸಲಾಗದು. ಹನ್ನೆರಡನೆಯ ಶತಮಾನದಲ್ಲಿ ಸನಾತನದ ವರ್ಣವ್ಯವಸ್ಥೆ, ಜಾತಿಭೇದ, ಲಿಂಗಭೇದಗಳನ್ನು ವಿರೋಧಿಸಿ ಪ್ರಗತಿಪರ ಚಿಂತನೆಗೆ ಹೆಸರಾದ ಲಿಂಗಾಯತ ಧರ್ಮವನ್ನು ಸ್ಥಾಪಿಸಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಆದರೆ ಪ್ರಗತಿಪರ ವಿಚಾರಧಾರೆಯ ಪ್ರತಿಪಾದಕರಾದ ಬಸವಣ್ಣನವರನ್ನು ಸನಾತನ(ಧರ್ಮ)ದ ಪ್ರತಿಪಾದಕರೆಂಬಂತೆ ಬಿಂಬಿಸಿ ಅವರಿಗೆ ಹಿಂದುತ್ವವನ್ನು ಆರೋಪಿಸಿರುವುದು ಬಸವಣ್ಣನವರಿಗೆ, ಬಸವ ತತ್ವಾದರ್ಶಗಳಿಗೆ ಮಾಡಿದ ಅಪಚಾರ ಎಂದು ಶ್ರೀಗಳು ಅಸಮಾಧಾನ ಹೊರಹಾಕಿದ್ದಾರೆ.

Edited By : Nagaraj Tulugeri
PublicNext

PublicNext

07/01/2021 07:55 pm

Cinque Terre

70.3 K

Cinque Terre

17