ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹನುಮ ಪೂಜೆ ಮಾಡಿದ ಮುಸ್ಲಿಮರು!

ಶಹಾಪುರ: ಕಾರ್ತಿಕ ಮಾಸದ ಅಂಗವಾಗಿ ನಾಡಿನೆಲ್ಲೆಡೆ ದೀಪೋತ್ಸವ ಸೇರಿ ಅನೇಕ ಧಾರ್ಮಿಕ ವಿಧಿ-ವಿಧಾನಗಳನ್ನು ಜನ ಆಚರಿಸುತ್ತಿದ್ದಾರೆ. ಆದ್ರೆ ಶಹಾಪುರ ತಾಲೂಕಿನ ಕನ್ಯಾಕೊಳ್ಳೂರ ಎಂಬ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಮುಸ್ಲಿಮರೇ ಪೂಜೆ ಸಲ್ಲಿಸುತ್ತಾರೆ. ಇದು ಬಹುವರ್ಷಗಳಿಂದ ನಡೆದು ಬಂದ ಪದ್ಧತಿ ಎಂದು ಸ್ವತಃ ಗ್ರಾಮಸ್ಥರೇ ಹೇಳುತ್ತಾರೆ.

ನಗರ ಪ್ರದೇಶಕ್ಕಿಂತ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಕಾರ್ತಿಕ ಮಾಸವನ್ನು ಸಂಭ್ರಮದಿಂದ ಆಚರಿಸಲಾಗುತ್ತೆ. ಅದರಲ್ಲಿ ಪ್ರತಿ ಶನಿವಾರ ಹನುಮ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು ರೂಢಿಗತವಾಗಿದೆ. ಕಾರ್ತಿಕ ಮಾಸದಲ್ಲಿ ಬರುವ ಐದು ಶನಿವಾರಗಳಲ್ಲಿ ಪ್ರತಿ ಶನಿವಾರ ಒಂದೊಂದು ಸಮುದಾಯದವರು ದೇವರಿಗೆ ಪೂಜೆ ಹಾಗೂ ಹರಕೆ ಸಲ್ಲಿಸುತ್ತಾರೆ ಎಂದು ಗ್ರಾಮದ ಮುಖಂಡ ಮಲ್ಲಿಕಾರ್ಜುನ ಸಾಹು ತಿಳಿಸಿದ್ದಾರೆ.

‘ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಅಂದಾಜು 100 ಕುಟುಂಬಗಳಿವೆ. ಈ ಪದ್ಧತಿಯನ್ನು ಹಲವು ವರ್ಷಗಳಿಂದ ನಾವೆಲ್ಲರೂ ಕೂಡಿ ಮಾಡಿಕೊಂಡು ಬಂದಿದ್ದೇವೆ. ನಮ್ಮಲ್ಲಿ ಯಾವುದೇ ಜಾತಿ ಮತ್ತು ಧರ್ಮದ ಭೇದಭಾವ ಇಲ್ಲ’ ಎನ್ನುತ್ತಾರೆ ಕನ್ಯಾಕೊಳ್ಳೂರ ಗ್ರಾಮದ ಮುಸ್ಲಿಂ ಸಮುದಾಯದ ಜನತೆ.

Edited By : Nagaraj Tulugeri
PublicNext

PublicNext

28/12/2020 09:34 am

Cinque Terre

82.49 K

Cinque Terre

18

ಸಂಬಂಧಿತ ಸುದ್ದಿ