ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಸೆಂಬರ್ 6ಕ್ಕೆ ಶಾಂತವಾಗಿತ್ತು ಅಯೋಧ್ಯೆ:ವಿವಾದ ತಣ್ಣಗಾದ ಲಕ್ಷಣ

ಅಯೋಧ್ಯೆ: ಪ್ರತಿವರ್ಷ ಡಿಸೆಂಬರ್​ 6ರಂದು ಅಯೋಧ್ಯೆಯಲ್ಲಿ ಹಿಂದೂಗಳು ವಿಜಯೋತ್ಸವವನ್ನು, ಹಾಗೂ ಮುಸ್ಲಿಮರು ಕರಾಳ ದಿನವನ್ನು ಆಚರಿಸಲು ಮುಂದಾಗುತ್ತಿದ್ದರು. ಆದರೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ. ಎರಡೂ ಸಮುದಾಯಗಳು ಸುಪ್ರೀಂಕೋರ್ಟ್​ ನೀಡಿದ ತೀರ್ಪು ಒಪ್ಪಿಕೊಂಡು, ಶಾಂತಿ ಕಾಪಾಡಲು ಮುಂದಾಗಿರುವುದರ ಹಿನ್ನೆಲೆಯಲ್ಲಿ ಈ ವರ್ಷ ಕರಾಳ ದಿನಾಚರಣೆಯಾಗಲೀ, ವಿಜಯೋತ್ಸವವಾಗಲೀ ಅಯೋಧ್ಯೆ ಸೇರಿದಂತೆ ದೇಶದ ಯಾವುದೇ ನಗರ-ಗ್ರಾಮಗಳಿಂದ ವರದಿಯಾಗಿಲ್ಲ.

ಸುಪ್ರೀಂಕೋರ್ಟ್​ ತೀರ್ಪಿನ ನಂತರ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ್ದರು. ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಮುಸ್ಲಿಮರಿಗೂ ಭೂಮಿ ನೀಡಬೇಕೆಂದು ನ್ಯಾಯಾಲಯ ಆದೇಶಿಸಿತ್ತು.

ಬಾಬರಿ ಮಸೀದಿ ಧ್ವಂಸದ ನಂತರ ಅಯೋಧ್ಯೆಯಲ್ಲಿ ಮುಸ್ಲಿಮರು ಪ್ರತಿ ವರ್ಷ ಡಿಸೆಂಬರ್ 6ರಂದು ಕಪ್ಪು ಬಾವುಟ ಪ್ರದರ್ಶಿಸಿ, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಕರಾಳ ದಿನ ಆಚರಿಸುತ್ತಿದ್ದರು. ಆದರೆ ತೀರ್ಪು ಬಂದ ನಂತರದ ಮೊದಲ ವರ್ಷಾಚರಣೆಯಾದ ಇಂದು ಆ ರೀತಿಯ ಯಾವ ಬೆಳವಣಿಗೆಗಳೂ ಕಂಡು ಬರಲಿಲ್ಲ. ಹಿಂಸಾಚಾರದಲ್ಲಿ ಅಸು ನೀಗಿದವರ ಸ್ಮರಣಾರ್ಥ ಬಜಾರ್ ಮಸೀದಿಯಲ್ಲಿ ಕುರಾನ್ ಪಠಣಕ್ಕೆ ವ್ಯವಸ್ಥೆ ಮಾಡಲಾಗಿತ್ತು.

Edited By : Nagaraj Tulugeri
PublicNext

PublicNext

06/12/2020 06:42 pm

Cinque Terre

153.97 K

Cinque Terre

4

ಸಂಬಂಧಿತ ಸುದ್ದಿ