ಪಬ್ಲಿಕ್ ನೆಕ್ಸ್ಟ್ ವಿಶ್ಲೇಷಣೆ
ದೇಶದ ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವ ಲವ್ ಜಿಹಾದ್ ಎಂಬ ಅಂಟು ಜಾಡ್ಯ ನಿರ್ಮೂಲನೆಯಾಗಲೇ ಬೇಕಾಗಿದೆ. ಹಿಂದೂ ಯುವತಿಯರನ್ನು ಮದುವೆಯಾಗ ಬೇಕೆಂಬ ದುರುದ್ದೇಶದಿಂದಲೇ ಧರ್ಮ ಪರಿವರ್ತನೆಯಲ್ಲಿ ತೊಡಗುತ್ತಿರುವ ವ್ಯವಸ್ಥಿತ ಸಂಚಿನ ಕ್ರೂರ ರೂಪವೇ " ಲವ್ ಜಿಹಾದ್ ''
ಮಧ್ಯಪ್ರದೇಶ ನಂತರ ಈಗ ಉತ್ತರ ಪ್ರದೇಶ ಸರಕಾರ ಸುಗ್ರಿವಾಜ್ಞೆ ಮೂಲಕ " ಲವ್ ಜಿಹಾದ್ '' ನಿರ್ಮೂಲನೆ ಮಾಡಲು ಮುಂದಾಗಿವೆ. ಶತಾಯ ಗತಾಯ ಕರ್ನಾಟಕದಲ್ಲೂ ಸಂಪೂರ್ಣ ನಿಷೇಧಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.
ಆದರೆ ಇನ್ನೂ ಮತಬ್ಯಾಂಕಿನ ಫೋಬಿಯಾದಿಂದ ಹೊರಬಾರದ ಕಾಂಗ್ರೆಸ್ ಪಕ್ಷದ ನಾಯಕರು ಇದನ್ನು ವಿರೋಧಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತಾಂತರಗೊಳ್ಳುವುದು ಅವರವರ ವೈಯಕ್ತಿಕ ತೀರ್ಮಾನ ಎಂದು ಕುಮ್ಮಕ್ಕು ನೀಡುತ್ತಿದ್ದಾರೆ.
ಉತ್ತರ ಪ್ರದೇಶದ ಕಾನ್ಪೂರ್ ಲವ್ ಜಿಹಾದ್ ಹಾಟ್ ಸ್ಪಾಟ್ ಎನ್ನಬಹುದು. ಅಲ್ಲಿಯ ಕೆಲವು ಮುಸ್ಲಿಂರು ಹಣೆಗೆ ತಿಲಕವಿಟ್ಟು, ಕೈಗೆ ಕೆಂಪುದಾರ ಕಟ್ಟಿಕೊಂಡು ಹೆಸರು ಬದಲಿಸಿಕೊಂಡು ಹಿಂದೂ ಯುವತಿಯರನ್ನು ಮದುವೆಯಾಗಲು ಯತ್ನಸಿದ ಪ್ರಕರಣ ಬಯಲಿಗೆ ಬಂದಿದೆ. ಎರಡು ಮೂರು ಮದುವೆಯಾದ ನಫೀಸ್ ಎಂಬಾತ ಮೋಸದಿಂದ ಹಿಂದೂ ಮಹಿಳೆಯನ್ನು ಮದುವೆಯಾಗಲು ಯತ್ನಿಸಿದ್ದಾನೆ. ಇಷ್ಟೇ ಅಲ್ಲ, ತನ್ನ ಪತ್ನಿಯರನ್ನು ಸಹೋದರಿ ಎಂದು ಪರಿಚಯಿಸಿದ್ದಾನೆ ಈ ಮುಠ್ಠಾಳ. ಇಂತಹ 11 ಪ್ರಕರಣಗಳು ಕಾನ್ಪೂರದಲ್ಲಿ ಬಹಿರಂಗವಾಗಿವೆ.
ಈ ಲವ್ ಜಿಹಾದ್ ಇರಬಹುದು, ಅಂತರ್ ಧರ್ಮೀಯ ಪ್ರೇಮವಿರಬಹುದು, ಹಿಂದೂ ಯುವಕ ಯುವತಿಯರು ಕಾಂಪ್ರಮೈಜ್ ಆಗುವಷ್ಟು ಬೇರೊಬ್ಬರು ಆಗುವುದಿಲ್ಲ. ಇತ್ತೀಚೆಗೆ ಇದೇ ಕಾರಣಕ್ಕೆ ಐಎಎಸ್ ಹಿಂದು-ಮುಸ್ಲಿಂ ದಂಪತಿ ವಿಚ್ಛೇದನ ಪಡೆದ ಉದಾಹರಣೆಯಿದೆ. ಕಾರಣ ಗೊತ್ತೆ? ಮದುವೆಯಾದ ನಂತರ ಹಿಂದೂ ಐಎಎಸ್ ಅಧಿಕಾರಿ ಟೀನಾ ಡಬೆ ತನ್ನ ಪತಿ ಅಖ್ತರ್ ಖಾನ್ ಹೆಸರನ್ನು ತನ್ನ ಹೆಸರಿನೊಂದಿಗೆ ಸೇರಿಸಲು ನಿರಾಕರಿಸಿದ್ದು.
ಮುಸ್ಲಿಂ ಯುವಕನ ಪ್ರೇಮಪಾಶದಲ್ಲಿ ಸಿಲುಕಿದ್ದ ಮಾಜಿ ಹಿಂದೂ ಸೈನ್ಯಾಧಿಕಾರಿಯ ಮಗಳೊಬ್ಬಳು ತಾನು ಐಎಸ್ಐ ಅನುಯಾಯಿ ಎಂಬಂತೆ ಬಿಂಬಿಸಿ ತಂದೆ ತಾಯಿ ನಡುವೆ ಬಿರುಕು ಮೂಡಿಸಲು ಯತ್ನಸಿದ ಘಟನೆ ದಿಲ್ಲಿಯಿಂದ ವರದಿಯಾಗಿದೆ. ಇಂತಹ ಅನೇಕ ಉದಾಹರಣೆಗಳಿವೆ.
ಇತ್ತೀಚೆಗಂತೂ ಹಿಂದೂ ಸಂಪ್ರದಾಯ, ಹಿಂದೂ ದೇವಾನು ದೇವತೆಗಳು ಅವಮಾನಿಸುವುದು, ಅಶ್ಲೀಲವಾಗಿ ಬಿಂಬಿಸುವುದು ಸಾಮಾನ್ಯವಾಗಿದೆ. ಈ ಮೊದಲು ಚಿತ್ರಗಳಲ್ಲಿ ಮಾತ್ರ ಹಿಂದೂ ಧರ್ಮವನ್ನು ಹೀಯಾಳಿಸಲಾಗುತ್ತಿತ್ತು. ಈಗ ಅಂತರ್ ಧರ್ಮೀಯ ಪ್ರೇಮದ ನೆಪದಲ್ಲಿ, ಜಾಹೀರಾತುಗಳಲ್ಲಿಯೂ ಹಿಂದೂ ಧರ್ಮವನ್ನು ಬಳಸಿಕೊಂಡು ಮತ್ತೊಂದು ಧರ್ಮವನ್ನು ವೈಭವೀಕರಿಸುವ ಸಂಚು ನಡೆದಿದೆ. ಇದಕ್ಕೆ ತಾಜಾ ಉದಾಹರಣೆ ತಾನಿಷ್ಕ್ ಆಭರಣ ಏಕತ್ವಂ ಜಾಹೀರಾತು.
ಹಿಂದೂಗಳ ಆಕ್ರೋಶ ಭುಗಿಲೆದ್ದಿದ್ದರಿಂದ ಕಂಪನಿಯು ಜಾಹೀರಾತನ್ನು ಹಿಂಪಡೆಯಿತು. ಕಾಕತಾಳೀಯ ಎಂಬಂತೆ ತಾನಿಷ್ಕ್ ಜಾಹೀರಾತಿನ ಬ್ರ್ಯಾಂಡ್ ಮ್ಯಾನೇಜರ್ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದ ಎಂದು ಹೇಳಲಾಗುತ್ತಿದೆ.
ನಾವು ಸ್ವಲ್ಪ ಹಿಂತಿರುಗಿ ನೋಡಿದಾಗ ಈ ಲವ್ ಜಿಹಾದ್ ಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕುಮ್ಮಕ್ಕು ನೀಡಿದ್ದೇ ಬಾಲಿವುಡ್. ಒಂದು ವಿಷಯದಲ್ಲಿ ನಾವು ಪಾಕಿಸ್ತಾನವನ್ನು ಹಾಗೂ ಅದರ ಬೆಂಬಲಿಗರನ್ನು ಮೆಚ್ಚಲೇ ಬೇಕು. ಅದು ಕ್ರಿಕೆಟ್ ಇರಲಿ, ಹಿಂದಿ ಸಿನೆಮಾಗಳಿರಲಿ, ತಮ್ಮ ದೇಶದ ಆಟಗಾರರು, ನಟರು ಭಾರತದ ವಿರುದ್ದ ಏನೇ ಧ್ವನಿ ಎತ್ತಿದರೂ ಸದಾ ಬೆಂಬಲಕ್ಕೆ ನಿಲ್ಲುತ್ತಾರೆ. ಆದರೆ ನಮ್ಮ ಬಾಲಿವುಡ್ ಅದಕ್ಕೆ ತದ್ವಿರುದ್ಧವಾಗಿದೆ.
ಇದೇ ಕಾರಣಕ್ಕೇ ಏನೋ ಪಾಕಿಸ್ತಾನ ಚಿತ್ರೋದ್ಯಮ ಹಿಂದೂ ಮಹಿಳೆಯರನ್ನು ಮತಾಂತರಗೊಳಿಸಲು ಪ್ರೋತ್ಸಾಹಿಸುತ್ತಿವೆ ಎಂದು ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂದರೆ ಅನೇಕ ದಶಕಗಳ ಹಿಂದಿನ Bordar ಚಿತ್ರದ ಕೆಲವು ದೃಶ್ಯಗಳು.
ಅದೊಂದು ದೃಶ್ಯ. ದುಬೈದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಬಾಕ್ಸಿಂಗ್ ಮ್ಯಾಚ್. ಭಾರತೀಯ ಮಹಿಳೆ ಪ್ರೀತಿ ಅದರ ಮುಖ್ಯ ಅತಿಥಿ. ಪಾಕ್ ಮೇಜರ್ ಖಾಲಿದ್ ಹಾಗೂ ಭಾರತೀಯ ಮೇಜರ್, ಹೆಸರು ಭಾರತ್. ಬಲಿಷ್ಟ ಖಾಲಿದ್ ಭಾರತೀಯ ಮೇಜರ್ ಭಾರತ್ ನನ್ನು ಗುದ್ದಿದಾಗ ಆತ ಕೆಳಗೆ ಕುಳಿತಿದ್ದ ಪ್ರೀತಿ ಕಾಲಡಿ ಬಂದು ಬೀಳುತ್ತಾನೆ. ಇದರಿಂದ ಪ್ರೀತಿ ಆಕರ್ಷಿತಳಾಗಿ ಖಾಲಿದ್ ನ ಪ್ರೇಮಪಾಶಕ್ಕೆ ಸಿಲುಕುತ್ತಾಳೆ. ನಂತರ ಆತನ ಕೋಣೆಗೆ ಹೋಗಿ ತನ್ನ ಹೃದಯದ ಮೇಲೆ ಅಟೋಗ್ರಾಫ್ ನೀಡಲು ಕೇಳುತ್ತಾಳೆ.
ಇಲ್ಲಿ ಚಿಗುರೊಡೆಯುತ್ತದೆ ಮತಾಂತರದ ಪ್ರಚಾರ. ಖಾಲಿದನನ್ನು ಭೇಟಿಯಾಗಲು ಆಕೆ ಪಾಕಿಸ್ತಾನಕ್ಕೆ ಹೋಗುತ್ತಾಳೆ, ಇಬ್ಬರ ಮಧ್ಯ ಪ್ರಮಾಂಕುರವಾಗುತ್ತೆ, ಹಿಂದೂ ಧಾರ್ಮಿಕ ಕ್ಷೇತ್ರದ ಹಿನ್ನೆಲೆಯಲ್ಲಿ " ನಾನು ಧರ್ಮವಾಗಲಿ ಸಂಪ್ರದಾಯವನ್ನಾಗಲಿ ಒಪ್ಪುವುದಿಲ್ಲ '' ಎಂಬರ್ಥದಲ್ಲಿ ಹಾಡುತ್ತಾಳೆ. ಇಷ್ಟೇ ಅಲ್ಲ, '' ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಹಿಂಸಿಸುವುದು ಒಂದು ಸಂಪ್ರದಾಯ ನನಗೆ ಎಲ್ಲ ಗೊತ್ತು '' ಎಂದು ಹೀಯಾಳಿಸುತ್ತಾಳೆ.
ದೃಶ್ಯ ಮುಂದುವರೆಯುತ್ತದೆ. " ಹಾಗಾದರೆ ನೀನು ಖಾಲಿದ್ ನನ್ನು ಪ್ರೀತಿಸುತ್ತಿಯೋ ಭಾರತ್ ನನ್ನು'' ಎಂದು ಕೇಳಿದಾಗ ಪ್ರೀತಿ ತಕ್ಷಣ ಖಾಲಿದ್ ಗೆ ಮುತ್ತಿಕ್ಕಿ ಭಾರತ್ ಮುಖಕ್ಕೆ ಥೂ..ಥೂ ಎಂದು ಉಗಿಯುತ್ತಾಳೆ.
ಒಂದೆಡೆ ನಾವು ಭಾರತೀಯರು ಎರಡು ರಾಷ್ಟ್ರಗಳ ನಡವೆ ಸಾಮರಸ್ಯ ಬೆಳೆಯಲ್ಲಿ ಸೌರ್ಹಾಧ ಸಂಬಂಧ ಮುಂದುವರಿಯಲಿ ಎಂಬ ಸದುದ್ದೇಶದಿಂದ " ಭಜರಂಗಿ ಭಾಯಿಜಾನ್ '' ದಂತದ ಚಿತ್ರ ನಿರ್ಮಿಸುತ್ತೇವೆ. ಇನ್ನೊಂದೆಡೆ ಕೆಲವು ಕೊಳಕು ಮನಸ್ಸಿನ ಬಾಲಿವುಡ್ ದಿಗ್ಗಜರು ಭಾರತವನ್ನು ಹೀಯಾಳಿಸುವ, ಅವಮಾನಿಸುವ, ಹಿಂದೂ ಧರ್ಮವನ್ನು ತುಚ್ಛವಾಗಿ ಕಂಡು ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಚಿತ್ರಗಳನ್ನು ನಿರ್ಮಿಸಿ ಅವುಗಳನ್ನು " Gems Of Bollywood'' ಎಂದು ಕೊಚ್ಚಿಕೊಳ್ಳುತ್ತಿರುವುದು ವಿಪರ್ಯಾಸ.
PublicNext
25/11/2020 01:56 pm