ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಈಗ ಜಗತ್ತಿನಾದ್ಯಂತ ಇದೆ. ಈ ವೇಳೆ ಲಕ್ಷ್ಮೀ ದೇವಿಯ ಮೂರ್ತಿ ಪ್ರತಿಷ್ಟಾಪಿಸಿ ಅದರ ಮುಂದೆ ಹಣ ಹಾಗೂ ಚಿನ್ನಾಭರಣ ಇಟ್ಟು ಪೂಜೆ ಮಾಡೋದು ಪರಂಪರಾಗತ ಪದ್ಧತಿ. ಆದ್ರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಲಕ್ಷ್ಮೀ ಪೂಜೆಯ ವಿಡಿಯೋ ಒಂದು ವೈರಲ್ ಆಗಿದೆ. ಇದು ನಾವು-ನೀವು ಹಿಂದೆಂದೂ ಕಂಡು ಕೇಳಿರದ ಲಕ್ಷ್ಮೀ ಪೂಜೆ. ಸಭಾಂಗಣದಂತಿರುವ ಕೋಣೆಯಲ್ಲಿ ಪೂಜೆ ಮಾಡಲಾಗಿದೆ. ಪೂಜೆಯ ವೇಳೆ ಇಡೀ ಸಭಾಂಗಣ ತುಂಬುವಂತೆ ಕಂತೆ ಕಂತೆ ಹಣ ಹಾಗೂ ಚಿನ್ನಾಭರಣಗಳನ್ನು ವಿದ್ಯುದಲಂಕಾರ ಮಾಡಿಡಲಾಗಿದೆ. ಇದು ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
PublicNext
17/11/2020 09:24 am