ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ : ಆನೆ ದಾಳಿಗೆ ತೆಂಗು ಅಡಿಕೆ ಮರ ನಾಶ

ರಾಮನಗರ : ಕಾಡಾನೆ ದಾಳಿಗೆ 15 ಕ್ಕೂ ಹೆಚ್ಚು ಪಸಲು ಬಿಡುತ್ತಿದ್ದ ತೆಂಗಿನ ಮರಗಳು ಹಾಗೂ ಮಾವಿನ ಮರಗಳು ಧರೆಗುರುಳಿದ್ದು ರೈತರಿಗೆ ಲಕ್ಷಾಂತರ ರೂಗಳ ನಷ್ಟವಾಗಿದೆ.

ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಅಮ್ಮನಪುರದೊಡ್ಡಿ ಗ್ರಾಮದ ರೈತರಾದ ವಿನುನಾಯಕ್, ಪಾಪನಾಯಕ್, ರಮೇಶನಾಯಕ್, ಲಕ್ಷ್ಮಣ್ ನಾಯಕ್ ರವರ ದೊಡ್ಡ ದೊಡ್ಡ ತೆಂಗಿನ ಮರಗಳು ಹಾಗೂ ಮಾವಿನ ಮರಗಳನ್ನು ಆನೆಗಳ ಹಿಂಡು ತಿಂದು ನಾಶಪಡಿಸಿವೆ.

ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳ ಹಿಂಡು ದಾಳಿ ನಡೆಸಿ ರೈತರು ಬೆಳೆದ ಬೆಳೆಯನ್ನು ನಾಶಪಡಿಸಿದ್ದು ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಒದಗಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ವರದಿ : ಎಲ್.ಜಿ.ಜಯರಾಮನಾಯಕ್ ಪಬ್ಲಿಕ್ ನೆಕ್ಸ್ಟ್

Edited By :
Kshetra Samachara

Kshetra Samachara

03/10/2022 10:06 pm

Cinque Terre

3.08 K

Cinque Terre

0