ಚನ್ನಪಟ್ಟಣ : ಗೌಡಗೆರೆ ಶ್ರೀ ಚಾಮುಂಡೇಶ್ವರಿ ಸನ್ನಿಧಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ ಗೌರವ ಲಭಿಸಿದೆ. ದೇವಾಲಯದ ಆವರಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಧರ್ಮದರ್ಶಿ ಶ್ರೀ ಮಲ್ಲೇಶ್ ಗುರೂಜಿ ಅವರಿಗೆ ಈ ಗೌರವ ಪ್ರದಾನ ಮಾಡಲಾಗಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಮಳೂರು ಹೋಬಳಿಯ ಗೌಡಗೆರೆ ಕ್ಷೇತ್ರ ಇದೀಗಾ ಲೋಕಪ್ರಸಿದ್ದಿ ಪಡೆದಿದೆ.
ಇನ್ನು ಈ ಪ್ರಶಸ್ತಿಯನ್ನ ಸಂಸ್ಥೆಯ ಮುಖ್ಯಸ್ಥರಾದ ಸಾಗರ್ ಉಪಸ್ಥಿತಿಯಲ್ಲಿ ಸಂಜೀವ್ ರೆಡ್ಡಿ ಅವರು ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಚಾಮುಂಡೇಶ್ವರಿ ವಿಗ್ರಹ ಪಂಚಲೋಹದ ವಿಗ್ರಹವಾಗಿದ್ದು, ವಿಶ್ವದಲ್ಲಿಯೇ ಅತೀ ಎತ್ತರವಾಗಿದೆ. ದೇವಿಯು ಶಕ್ತಿ ರೂಪಿಣಿಯಾಗಿ ನಿಂತಿರುವ ಭಂಗಿಯಲ್ಲಿರುವ ದೇಗುಲ ಎಲ್ಲಿಯೂ ಇಲ್ಲ, ಇದರ ಜೊತೆಗೆ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚಿನ ಭಕ್ತರನ್ನು ಆಕರ್ಷಸಿದ ಹಿರಿಮೆ ಹಾಗೂ ಭಕ್ತರ ಆಶಯಗಳನ್ನು ಈಡೇರಿಸಿದ ಪ್ರತೀತಿ ಹಿನ್ನೆಲೆಯಲ್ಲಿ ಪರಿಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಲಾಗಿದೆ ಎಂದರು.
ಜೊತೆಯಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಮಲ್ಲೇಶ್ ಗುರೂಜಿ ಅವರು ಮಾತನಾಡಿ, ದೇವಿಯು ಸನ್ನಿಧಿಯಲ್ಲಿ ನಂಬಿ ಬಂದ ಭಕ್ತರಿಗೆಲ್ಲ ಅವರ ಅಪೇಕ್ಷೆಗಳು ಈಡೇರಿಸಿದೆ. ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ದಿನನಿತ್ಯ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಸನ್ನಿಧಿಯಲ್ಲಿ ಯಾವುದೇ ತಾರತಮ್ಯ ಇಲ್ಲದೆ, ಎಲ್ಲರಿಗೂ ಸಮಾನವಾಗಿ ದರ್ಶನ ಸಿಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬುಕ್ ಆಫ್ ರೆಕಾರ್ಡ್ಸ್‌ನ ಸಗಾಯಿರಾಜು, ಸಂಘಟಕ ಸಂಜೀವ ರೆಡ್ಡಿ, ಮುಖಂಡರಾದ ಮಾಗನೂರು ಗಂಗರಾಜು, ನಿವೃತ್ತ ಪೊಲೀಸ್ ಅಧಿಕಾರಿ ರಾಮಕೃಷ್ಣಪ್ಪ, ಶ್ರೀ ಕ್ಷೇತ್ರದ ಟ್ರಸ್ಟ್‌ನ ಬಾಬು ಉಪಸ್ಥಿತರಿದ್ದರು.
PublicNext
28/01/2025 08:15 am