ಕನಕಪುರ: ಕಾರ್ಖಾನೆಯು ಬಿಟ್ಟ ವಿಷದ ತ್ಯಾಜ್ಯವನ್ನು ತಿಂದು ಹಸು ಸಾವನ್ನಪ್ಪಿರುವ ಘಟನೆ ಹಾರೋಹಳ್ಳಿ ಹೋಬಳಿಯ ಗಾಣಾಳು ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಕನಕಪುರ ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಗಾಣಾಳು ದೊಡ್ಡಿ ಗ್ರಾಮದ ಅರವಿಂದ್ ಮಹೇಶ್ ಎಂಬವರಿಗೆ ಸೇರಿದ ಒಂದುವರೆ ವರ್ಷದ ಹಸು ಮೃತಪಟ್ಟಿದ್ದು ಕೂಡಲೇ ಕ್ರಮಕ್ಕಾಗಿ ಮಹೇಶ್ ಆಗ್ರಹಿಸಿದ್ದಾರೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಕೈಗಾರಿಕೆಗಳು ಇದ್ದು ಅವುಗಳಿಂದ ಬರುವ ವಿಷ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಡುತ್ತಿದ್ದು ಇದರಿಂದ ಜಾನುವಾರುಗಳು ಜನರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಇದೇ ಮೊದಲಲ್ಲ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿರುವ ಬಿಗ್ ಡ್ರಮ್ಸ್ ಎಂಬ ಕಾರ್ಖಾನೆಯೂ ತನ್ನ ವಿಷದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ತಂದು ಹಾಕುತ್ತಿದೆ. ಮೊದಲು ಸಹ ಈ ಕಾರ್ಖಾನೆಯು ತನ್ನ ಹೊಣೆ ಮರೆತು ಹೊಣೆಗೇಡಿತನವನ್ನು ಪ್ರದರ್ಶಿಸುತ್ತಿದ್ದು ಈ ಪ್ರವೃತ್ತಿ ಇನ್ನು ಮುಂದುವರೆದಿದ್ದು ಇದರಿಂದ ಸುತ್ತ ಮುತ್ತಲ ವಾಸಿಗಳಿಗೆ, ಜನ ಜಾನುವಾರಿಗೆ ತುಂಬಾ ತೊಂದರೆ ಉಂಟಾಗಿದೆ, ಆದ್ದರಿಂದ ಈ ಕೂಡಲೇ ಪರಿಸರ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಸೂಕ್ತ ಪರಿಹಾರ ಕೊಡಿಸಬೇಕೆಂದು ಅರವಿಂದ್ ಮಹೇಶ್ ಅವರು ಆಗ್ರಹಿಸಿದ್ದಾರೆ.
PublicNext
12/10/2022 08:12 pm