ರಾಮನಗರ: ಮಂಗಳೂರಲ್ಲಿ ಪೀಪಲ್ಸ್ ಫ್ರಂಟ್ ಆಫ್ ಇಂಡಿಯ (PFI) ಮತ್ತು ಸೋಶಲಿಸ್ಟ್ ಡೆಮೊಕ್ರ್ಯಾಟಿಕ್ ಪಾರ್ಟಿ ಆಫ್ ಇಂಡಿಯ (SDPI) ಕಾರ್ಯಕರ್ತರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ದಾಳಿ ನಡೆಸಿ ಹಲವರನ್ನು ಬಂಧಿಸಿದ ಬಳಿಕ ರಾಮನಗರ ಸೇರಿದಂತೆ ರಾಜ್ಯಾದ್ಯಂತ ಶಂಕಿತ ಕಾರ್ಯಕರ್ತರ ಮನೆಗಳ ಮೇಲೆ ದಾಳಿಗಳು ನಡೆಯುತ್ತಿವೆ.
ರಾಮನಗರ ಟಿಪ್ಪು ನಗರ ರೆಹಮಾನಿಯ ನಗರಮತ್ತು ಸುತ್ತಮುತ್ತ ಸ್ಥಳಗಳಲ್ಲಿ ರಾಮನಗರ ನಗರ ಠಾಣೆ ಮತ್ತು ಐಜೂರು ಪೊಲೀಸರು ದಾಳಿ ನಡೆಸಿದ್ದು ಲಭ್ಯವಿರುವ ಮಾಹಿತಿ ಪ್ರಕಾರ ಪೊಲೀಸರು 10 ಕ್ಕೂ ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಶಂಕಿತರ ಕುಟುಂಬಗಳ ಸದಸ್ಯರು ಐಜೂರು ಪೊಲೀಸ್ ಠಾಣೆಯ ಮುಂದೆ ಜಮಾವಣೆಗೊಂಡು ತಮ್ಮ ಕುಟುಂಬಗಳ ಸದಸ್ಯರನ್ನು ವಿನಾಕಾರಣ ವಶಕ್ಕೆ ತೆಗೆದುಕೊಳ್ಳಲಾಗಿದೆ, ಅವರೆಲ್ಲ ಅಮಾಯಕರು ಎಂದು ಪೊಲೀಸರೊಂದಿಗೆ ವಾದಿಸಿದರು.
ಭಯೋತ್ಪಾದಕ ಕೃತ್ಯಗಳನ್ನು ನಡೆಸಿ ನಾಗರಿಕರಲ್ಲಿ ಭಯದ ವಾತಾವರಣ ಮೂಡಿಸಿ ಸಮಾಜದ ಶಾಂತಿ ಕದಡುವ ಯತ್ನಗಳಾಗುತ್ತಿದ್ದು ಸರ್ಕಾರ ಅದಕ್ಕೆ ಮಟ್ಟ ಹಾಕಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದರು.
ವರದಿ : ಎಲ್.ಜಿ.ಜಯರಾಮನಾಯಕ್ ಪಬ್ಲಿಕ್ ನೆಕ್ಸ್ಟ್
Kshetra Samachara
27/09/2022 02:53 pm