ಕನಕಪುರ : ಅಡುಗೆ ಕೆಲಸ ಮಾಡಲು ಬಂದಿದ್ದ ವ್ಯಕ್ತಿಯೊಬ್ಬ ಅಡುಗೆ ಮಾಡಲು ಹೋಗಿ ಗ್ಯಾಸ್ ಲೀಕಾದ್ದರಿಂದ ಒಮ್ಮೆಲೆ ಜೋರಾದ ಬೆಂಕಿ ಕಾಣಿಸಿಕೊಂಡ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಹುಳುಗೊಂಡನಹಳ್ಳಿ ರಸ್ತೆಯಲ್ಲಿ ನಡೆದಿದೆ.
ಸಾವನ್ನಪ್ಪಿರುವ ವ್ಯಕ್ತಿಯನ್ನು ಬಿಹಾರ ಮೂಲದ ಆಕಾಶ್ ಕುಮಾರ್ ರೈ ಎಂದು ಗುರುತಿಸಲಾಗಿದ್ದು. ಆಕಾಶ್ ಕುಮಾರ್ ರೈ ಅವರು ಶೆಡ್‌ನಲ್ಲಿರುವ ಕೂಲಿ ಕಾರ್ಮಿಕರಿಗೆ ಅಡುಗೆ ಮಾಡಲು ನೀಮಕಗೊಂಡಿದ್ದರು ಅದರಂತೆ ಅಡುಗೆ ಮಾಡಲು ತೆರಳಿದ ಆಕಾಶ್ ನೆಲದ ಮೇಲಿದ್ದ ಗ್ಯಾಸ್ ಸ್ಟೌವ್‌ನ್ನು ಹಚ್ಚಿದ್ದಾರೆ ಈ ವೇಳೆ ಗ್ಯಾಸ್ ಲೀಕಾಗಿದ್ದರಿಂದ ಒಮ್ಮೆಲೆ ಬೆಂಕಿಯ ಜ್ವಾಲೆ ಹರಡಿದೆ ಆಕಾಶ್‌ಗೆ ಎದೆಯಹಾಗೂ ಕೈ ಕಾಲುಗಳ ಮೇಲೆ ಸುಟ್ಟ ಗಾಯಗಳಾದ್ದರಿಂದ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಆಕಾಶ್ ಕುಮಾರ್ ರೈ ಮೃತಪಟ್ಟಿದ್ದಾರೆ. ಆಕಾಶ್ ಮೃತಪಟ್ಟ ವಿಷಯವನ್ನು ಅವರ ತಂದೆ ತಾಯಿಗೆ ತಿಳಿಸಲಾಗಿದ್ದು ಹಾರೋಹಳ್ಳಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
07/10/2022 09:03 am